ಗಂಗಾವತಿ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಅಧಿಕಮಾಸ ನಿಮಿತ್ತ ಶ್ರೀ ಪುರುಷೋತ್ತಮ ಹೋಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು. ವಿಚಾರಣಕರ್ತ ರಾಘವೇಂದ್ರ ಮೇಗೂರು, ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ, ವಿದ್ಯಾಪೀಠದ ಉಪನ್ಯಾಸಕ ವಾಗೀಶಾಚಾರ್ ಗೋರೆಬಾಳ್ ಇತರರಿದ್ದರು. 
ಕೊಪ್ಪಳ

ಜ್ಞಾನ ಸತ್ರ ಮಂಗಳೋತ್ಸವ ಸಂಪನ್ನ

ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಅಧಿಕ ಮಾಸದ ಜ್ಞಾನ ಸತ್ರ ಮಂಗಳೋತ್ಸವ ಸೋಮವಾರ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಲ್ಲಿನ ಪರಿವಾರದ ಮೂರ್ತಿಗಳಿಗೆ ವಿಶೇಷ ಪೂಜೆ, ಪಾರಾಯಣ, ಗುರುಪಾದುಕೆಗಳಿಗೆ ಅಷ್ಟೋತ್ತರ ಮೂಲಕ ಪುಷ್ಪಾರ್ಚನೆ, ಮಹಾಮಂಗಳಾರತಿ, ಉಡಿ ತುಂಬುವುದು ಮತ್ತು ಭಜನಾ ಮಂಡಳಿಯಿಂದ ನಿರಂತರ ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಅಧಿಕ ಮಾಸದ ಜ್ಞಾನ ಸತ್ರ ಕುರಿತು ಶಿಕ್ಷಕಿ ಶಕುಂತಲಾ ಕುಲ್ಕರ್ಣಿ ಉಪನ್ಯಾಸ ನೀಡಿದರು. ಶ್ರೀ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಶಂಗೇರಿಯ ಉಭಯ ಶ್ರೀ ಆದೇಶಾನುಸಾರ 33 ದಿನ ವಿಶೇಷ ಪೂಜೆ, ಅಷ್ಟೋತ್ತರ ಪಾರಾಯಣ ಸೇರಿ ಉಪನ್ಯಾಸ ಜರುಗಿದ್ದು, ವಿವಿಧ ಭಜನಾ ಮಂಡಳಿ ನೆರವಾಗಿವೆ ಎಂದರು. ಪ್ರಮುಖರಾದ ಭೀಮಸೇನ್‌ಭಟ್, ಮಹೇಶ ಭಟ್ ಜೋಶಿ, ರಾಘವೇಂದ್ರ ಅಳವಂಡಿಕರ್, ಶೇಷಗಿರಿ ಗಡಾದ್, ಪ್ರಕಾಶ ಅಳವಂಡಿ, ಶ್ರೀಧರ, ಬಾಲಕಷ್ಣ ದೇಸಾಯಿ, ಅನಿಲ ಅಳವಂಡಿ, ಭೀಮಶಂಕರ, ಪ್ರಹ್ಲಾದ್ ದಿಗ್ಗಾವಿ ಇತರರಿದ್ದರು.

ಶ್ರೀ ಸತ್ಯನಾರಾಯಣ ದೇವಾಲಯ

ನಗರದ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಅಧಿಕಮಾಸ ನಿಮಿತ್ತ ಶ್ರೀ ಪುರುಷೋತ್ತಮ ಹೋಮ ಮತ್ತು ಪೂರ್ಣಾಹುತಿ ಸಂಪನ್ನ ಜರುಗಿತು.
ಶ್ರೀ ಪೇಜಾವರ ಅಧೋಕ್ಷಜ ಮಠದ ವಿದ್ಯಾಪೀಠದಿಂದ ಹಮ್ಮಿಕೊಂಡಿದ್ದು, ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗಳಿಗೆ ವಿಶೇಷ ಪೂಜೆ, ಅಲಂಕಾರ, ಭಜನೆ ಮತ್ತು ವಿದ್ಯಾಪೀಠದ ಉಪನ್ಯಾಸಕ ವಾಗೀಶಾಚಾರ್ ಗೋರೆಬಾಳ್‌ರಿಂದ ಉಪನ್ಯಾಸ ನಡೆಯಿತು.
ಅಧಿಕ ಮಾಸದ ಜ್ಞಾನ ಸತ್ರ ಕುರಿತು ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ ಮಾತನಾಡಿದರು. ವಿಚಾರಣಕರ್ತ ರಾಘವೇಂದ್ರ ಮೇಗೂರು, ಪ್ರಮುಖರಾದ ರಾಘವೇಂದ್ರ ಕುಲ್ಕರ್ಣಿ, ನಾರಾಯಣರಾವ್ ವೈದ್ಯ, ತಿರುಮಲರಾವ್, ಶ್ರೀಶಾಚಾರ್ ಇತರರಿದ್ದರು.