ಗಂಗಾವತಿ ಶ್ರೀ ಯೋಗೀಶ್ವರ ಯಾಜ್ಞವಲ್ಕೃ ದೇವಾಲಯದಲ್ಲಿ ಅಧಿಕ ಮಾಸದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಸತ್ರ ಕಾರ್ಯಕ್ರಮದ ಸಮಾರೋಪದ ನಿಮಿತ್ತ ಶ್ರೀ ಪುರುಷೊತ್ತಮ ಹೋಮ ಪೂರ್ಣಾಹುತಿ ನೆರವೇರಿತು. ಹುಣಸಿಹೊಳೆಯ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರು, ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ ಇತರರಿದ್ದರು. 
ಕೊಪ್ಪಳ

ಜ್ಞಾನ ಸತ್ರ ಕಾರ್ಯಕ್ರಮ ಸಂಪನ್ನ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಅಧಿಕಮಾಸ ನಿಮಿತ್ತ ಯಾಜ್ಞವಲ್ಕೃ
  • ಗಂಗಾವತಿ ದೇಗುಲದಲ್ಲಿ ಧಾರ್ಮಿಕ ಕೈಂಕರ್ಯ
ಗಂಗಾವತಿ: ಅಧಿಕ ಮಾಸದ ಹಿನ್ನೆಲೆಯಲ್ಲಿ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕೃ ದೇವಾಲಯದಲ್ಲಿ ಹಮ್ಮಿಕೊಂಡ ಜ್ಞಾನ ಸತ್ರ ಕಾರ್ಯಕ್ರಮದ ಸಮಾರೋಪ ನಡೆಯಿತು.
ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದ ನಿಮಿತ್ತ ಮೇ 9ರಿಂದಲೇ ದೇವಾಲಯದಲ್ಲಿ ಜ್ಞಾನ ಸತ್ರ ಆರಂಭವಾಗಿದ್ದು, 33ದಿನ ವಿಭಿನ್ನ ಧಾರ್ಮಿಕ ಮತ್ತು ಆಧ್ಯಾತ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರೋಪ ಹಿನ್ನೆಲೆ ದೇವಾಲಯದಲ್ಲಿ ಶ್ರೀ ಪುರುಷೊತ್ತಮ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು.
ಪುರ ಪ್ರವೇಶಿಸಿದ ಹುಣಸಿಹೊಳೆಯ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಶನಿವಾರ ಆರಂಭಿಸಿದ್ದು, ಶ್ರೀಗಳ ಪಾದಪೂಜೆ, ಶ್ರೀ ವಿಠ್ಠಲ ಕೃಷ್ಣ ತೊಟ್ಟಿಲು ಸೇವೆ, ಭಾನುವಾರ ಹೋಮ, ಪೂರ್ಣಾಹುತಿ, ಸಂಸ್ಥಾನ ಪೂಜೆ, ಭಕ್ತರಿಗೆ ತಪ್ತ ಮುದ್ರಾಧಾರಣೆ, ಪ್ರಸಾದ ವಿತರಣೆ ನಡೆಯಿತು. ಅಧಿಕ ಮಾಸದ ಜ್ಞಾನ ಸತ್ರ ಕುರಿತು ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ ಗಂಗನಾಳ ಮಾಹಿತಿ ನೀಡಿದರು.
ಪ್ರಮುಖರಾದ ತಿರುಮಲರಾವ್ ಆಲ್ಲಂಪಲ್ಲಿ, ಮೇಗೂರು ರಾಘವೇಂದ್ರ, ರಮೇಶ ಕುಲ್ಕರ್ಣಿ ಮರಳಿ, ಗುರುರಾಜ ಚಿರ್ಚನಗುಡ್ಡ, ರಾಘವೇಂದ್ರ ಲೆಕ್ಕಿಹಾಳ್, ರಂಗನಾಥ ವಟಗಲ್, ಮನೋಹರ, ಶ್ರೀಕಾಂತ, ಶೇಷಗಿರಿ ಕುಲ್ಕರ್ಣಿ, ಕೊಮಲಾಪುರ ರಾಮು, ಪ್ರಕಾಶರಾವ್ ಇತರರಿದ್ದರು.