ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಬಾಳೆ ಬೆಳೆಯನ್ನು ಸೋಮವಾರ ಜೆಡಿಎಸ್ ನಾಯಕರು ವೀಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಪದಾಧಿಕಾರಿಗಳಾದ ಶಿವಕುಮಾರ ಏಣಿಗಿ, ಸುರೇಶ ಪುಜಾರಿ, ಮಾರುತಿಗೌಡ, ಸೋಮನಗೌಡ ಹೊಗಾರನಾಳ ಇದ್ದರು.
- ಬೆಳೆಹಾನಿ ಪ್ರದೇಶಕ್ಕೆ ಜೆಡಿಎಸ್ ನಾಯಕರ ಭೇಟಿ
ಕೊಪ್ಪಳ : ಗಾಳಿ-ಮಳೆಯಿಂದ ಹಾನಿಯಾದ ಬೆಳೆಗೆ ಎರಕರೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಸರ್ಕಾರಕ್ಕೆ ಆಗ್ರಹಿಸಿದರು.
ಸೋಮವಾರ ಹ್ಯಾಟಿ, ಮೆಳ್ಳಿಕೇರಿ, ಮುದ್ದಾಬಳ್ಳಿ ಭಾಗಗಳ ಹೊಲಗಳಿಗೆ ಭೇಟಿ ನೀಡಿ ಮಳೆ ಹಾನಿ ವೀಸಿ ಮಾತನಾಡಿದರು.
ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ, ಕಬ್ಬು, ವೀಳ್ಯದೆಲೆ ಸಂಪೂರ್ಣ ನೆಲ ಕಚ್ಚಿವೆ. ವರ್ಷವಿಡೀ ಲಾಂತರ ರೂ. ಖರ್ಚು ಮಾಡಿದ ರೈತರು ಸಲಿನ ನಿರೀೆಯಲ್ಲಿದ್ದರು. ಈ ಹಂತದಲ್ಲಿ ಅಕಾಲಿಕವಾಗಿ ನಷ್ಟ ಸಂಭವಿಸಿದೆ. ಸಾಕಷ್ಟು ನಷ್ಟವಾಗಿದೆ. ಎಕರೆಗೆ ಕನಿಷ್ಠ 5 ಲಕ್ಷ ರೂ.ನಂತೆ ಸರ್ಕಾರ ಪರಿಹಾರ ನೀಡಬೇಕು. ಅಧಿಕಾರಿಗಳು ಸಕಾಲಕ್ಕೆ ವರದಿ ಸಲ್ಲಿಸಿ. ರೈತರ ಖಾತೆಗೆ ಪರಿಹಾರ ಜಮಾ ಮಾಡಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ರೈತರಾದ ಈಶಪ್ಪ ಎಡ್ರಮನಹಳ್ಳಿ, ವೆಂಕಣ್ಣ ಡಂಬಳ್ಳಿ, ಕೊಟ್ರೇಶ ಸಣ್ಣ ಮುದಿಯಪ್ಪನವರ್, ವೆಂಕಣ್ಣ ಸಣ್ಣ ಮದಿಯಪ್ಪನವರ್, ಮಲ್ಲಯ್ಯ ಗಣಚಾರಿ, ಬಸಣ್ಣ ಸಿಗ್ನಳ್ಳಿ, ಸಂತೋಷ ಸಿಗ್ನಳ್ಳಿ ಜಮೀನುಗಳಿಗೆ ಜೆಡಿಎಸ್ ನಾಯಕರು ಭೇಟಿ ನೀಡಿದರು.
ಪದಾಧಿಕಾರಿಗಳಾದ ಶಿವಕುಮಾರ ಏಣಿಗಿ, ಸುರೇಶ ಪುಜಾರಿ, ಮಾರುತಿಗೌಡ, ಸೋಮನಗೌಡ ಹೊಗಾರನಾಳ, ರವಿ ಮೇದಾರ, ಪ್ರಕಾಶರೆಡ್ಡಿ ಬಸರಗಿಡದ, ಮಂಜುನಾಥ ಇತರರಿದ್ದರು.