ಮಹಿಳಾ ಮೀಸಲು ಮಸೂದೆ ವಿರೋಧಿಸಿದ ಕಾಂಗ್ರೆಸ್ ಸಂಸದರ ನಡೆ ಖಂಡಿಸಿ ಜೆಡಿಎಸ್ ನಾಯಕರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಸಿ.ವಿ.ಚಂದ್ರಶೇಖರ, ಸುರೇಶ ಭೂಮರಡ್ಡಿ, ಜಯಶ್ರೀ ಮೇದಾರ, ರಶ್ಮಿ ಚಳಗೇರಿ, ಮೂರ್ತೆಪ್ಪ ಗಿಣಿಗೇರಿ, ಕರಿಯಪ್ಪ ಹಾಲವರ್ತಿ ಇದ್ದರು.
- ಕೈ ನಾಯಕರು ಮಹಿಳೆಯರ ಕ್ಷಮೆ ಕೇಳಿ
ಕೊಪ್ಪಳ: ನಾರಿಶಕ್ತಿ (ವಂದನ್) ಮಸೂದೆ ತಿರಸ್ಕರಿಸಿದ ಕಾಂಗ್ರೆಸ್ ಸಂಸದರು ದೇಶದ ಮಹಿಳೆಯರ ಕ್ಷಮೆ ಕೇಳಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಮಹಿಳಾ ಟಕ ನೇತೃತ್ವದಲ್ಲಿ ಪದಾಧಿಕಾರಿಗಳು ನರಗದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಮಹಿಳೆಯರ ಬಗ್ಗೆ ಕಿಂಚತ್ತಾದರೂ ಕಳಕಳಿಯಿದ್ದರೇ ರಾಜಶೇಖರ್ ಹಿಟ್ನಾಳ್ ಸೇರಿ ರಾಜ್ಯದ ಒಂಬತ್ತೂ ಸಂಸದರು ರಾಜೀನಾಮೆ ನೀಡಿ. ಮಹಿಳಾ ಮತದಾರರು ಸಂಸದರಿಗೆ ಏನು ಅನ್ಯಾಯ ಮಾಡಿದ್ದಾರೆ ? ಮಹಿಳೆಯರ ಗೌರವಕ್ಕಿಂತಲೂ ಹೈಕಮಾಂಡ್ ಗುಲಾಮಗಿರಿತನ ಹೆಚ್ಚಾಯಿತೆ ? ಸಾಂಸತಿಕ ಕಾರ್ಯಕ್ರಮ ಹೆಸರಿನಲ್ಲಿ ಅಸಭ್ಯ ಕ್ರಿಡೆ ಪ್ರೋತ್ಸಾಹಿಸಿ ಹೆಣ್ಣು ಮಕ್ಕಳನ್ನ ದಾರಿ ತಪ್ಪಿಸುವುದರಲ್ಲಿ ಇರುವ ಆಸಕ್ತಿ ಮಹಿಳಾ ಮಸೂದೆ ಜಾರಿ ಮಾಡಿಸುವಲ್ಲಿ ಇರಲಿಲ್ಲವಾ ಎಂದು ಟೀಕಿಸಿದರು.
ನಗರ ಮಹಿಳಾ ಟಕ ಅಧ್ಯೆ ರ್ನಿಲ ಮೇದಾರ ಮಾತನಾಡಿ, ಕಾಂಗ್ರೆಸ್ನಿಂದ ಭಾರತದ ಮಹಿಳಾ ಶಕ್ತಿಗೆ ಅಪಮಾನವಾಗಿದೆ. ಕಾಂಗ್ರೆಸ್ ಸಂಸದರಿಗೆ ನಮ್ಮ ಶಾಪ ತಟ್ಟಲಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಪ್ರಧಾನಿ ಆಗಿದ್ದಾಗ ಮಸೂದೆ ಮಂಡಿಸಿದ್ದರು. ಆಗಲೂ ಕಾಂಗ್ರೆಸ್ ವಿರೋಧಿಸಿದೆ. ಕಾಂಗ್ರೆಸ್ ನೀತಿಗೆ ಮುಂದೆ ತಕ್ಕ ಬುದ್ಧಿ ಕಲಿಸುತ್ತೇವೆಂದು ಕಿಡಿ ಕಾರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ಸೋಲಿಸುವ ಮೂಲಕ ಕಾಂಗ್ರೆಸ್ ತನ್ನ ಶವ ಪೆಟ್ಟಿಗೆಗೆ ತಾನೇ ಕೊನೆಯ ಮಳೆ ಹೊಡೆದುಕೊಂಡಿದೆ ಎಂದರು.
ಪಕ್ಷದ ಪದಾಧಿಕಾರಿಗಳಾದ ಜಯಶ್ರೀ ಮೇದಾರ, ರಶ್ಮಿ ಚಳಗೇರಿ, ಮೂರ್ತೆಪ್ಪ ಗಿಣಿಗೇರಿ, ಕರಿಯಪ್ಪ ಹಾಲವರ್ತಿ, ಮಲ್ಲನಗೌಡ ಕೋನನಗೌಡರ್, ಈಶಪ್ಪ ಮಾದಿನೂರು, ರತ್ನಮ್ಮ ಹಿರೇಮಠ, ಶರಣಮ್ಮ ಸಂಗನಾಳ, ವೀರೇಶ್ ಗೌಡ್ರು ದಳಪತಿ, ಮಂಜುನಾಥ್ ಸೊರಟೂರ್, ರಮೇಶ್ ಡಂಬ್ರಳ್ಳಿ, ಸೋಮನಗೌಡ ಹೊಗರನಾಳ ಇತರರಿದ್ದರು.