ಮುಂಗಾರು ಆರಂಭಕ್ಕು ಮುನ್ನವೇ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡುವಂತೆ ಒತ್ತಾಯಿಸಿ ಜೆಡಿಎಸ್ ನಾಯಕರು ಸೋಮವಾರ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ರಾಜ್ಯ ಯುವ ಟಕ ಕಾರ್ಯಾಧ್ಯಕ್ಷ ರಾಜು ನಾಯಕ, ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಪದಾಧಿಕಾರಿಗಳಾದ ವೆಂಕಟೇಶರಾವ್, ಈಶಪ್ಪ ಮಾದಿನೂರು ಇದ್ದರು.
- ಒತ್ತಾಯಿಸಿ ಡಿಸಿಗೆ ಜೆಡಿಎಸ್ ಮನವಿ
ಕೊಪ್ಪಳ : ಮುಂಗಾರು ಆರಂಭಕ್ಕು ಮುನ್ನವೇ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಟ್ಟುಕೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು.
ಈ ತಿಂಗಳ ಮೂರನೇ ವಾರದಲ್ಲಿ ಮುಂಗಾರು ಪ್ರವೇಶ ಆಗುವ ನಿರೀೆ ಇದೆ. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಕಳೆದ ವರ್ಷ ರಸಗೊಬ್ಬರ ಕೊರತೆ ಆಗಿದೆ. ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಗೊಬ್ಬರ ಸಿಗದೆ ಮಣ್ಣು ತಿನ್ನುವ ಸ್ಥಿತಿ ಬಂದಿದ್ದು ರಾಜ್ಯ, ಕೇಂದ್ರ ಸರ್ಕಾರಗಳೂ ರಸಗೊಬ್ಬರ ಕೊರತೆ ಬಗ್ಗೆ ಪರಸ್ಪರ ಆರೋಪ&ಪ್ರತ್ಯಾರೋಪ ಮಾಡುವ ಸ್ಥಿತಿ ಬಂದಿತ್ತೆಂದು ಹೇಳಿದರು.
ಮುಂಗಾರು ಆರಂಭಕ್ಕು ಮುನ್ನವೇ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿ. ರೈತರ ಬೇಡಿಕೆ ಮಾಹಿತಿ ಪಡೆಯಿರಿ. ರೈತ ಸಂಪರ್ಕ ಕೇಂದ್ರಗಳ ಜತೆಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆದು ಬಿತ್ತನೆ ಬೀಜ ಪೂರೈಸಬೇಕು. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಯಬೇಕು. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆವಹಿಸುವಂತೆ ಒತ್ತಾಯಿಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ರಾಜ್ಯ ಯುವ ಟಕ ಕಾರ್ಯಾಧ್ಯಕ್ಷ ರಾಜು ನಾಯಕ, ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಪದಾಧಿಕಾರಿಗಳಾದ ವೆಂಕಟೇಶರಾವ್, ಈಶಪ್ಪ ಮಾದಿನೂರು, ಮಲ್ಲನಗೌಡ ಕೋನನಗೌಡ, ಮೂರ್ತೆಪ್ಪ ಹಿಟ್ನಾಳ, ಕರಿಯಪ್ಪ ಹಾಲವರ್ತಿ, ಮಂಜುನಾಥ ಸೊರಟೂರು, ರಮೇಶ ಡಂಬ್ರಳ್ಳಿ ಇತರರಿದ್ದರು.