ಯಲಬುರ್ಗಾದಲ್ಲಿ ಕ್ಷತ್ರಿಯ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಜಗದಂಬಾದೇವಿ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಪ್ರಮುಖರಾದ ಶೇಖರಗೌಡ ಉಳ್ಳಾಗಡ್ಡಿ, ಅಮರೇಶ ಹುಬ್ಬಳ್ಳಿ, ವಸಂತಕುಮಾರ ಭಾವಿಮನಿ, ಟಿ.ಜೆ.ದಾನಿ, ದೇವಪ್ಪ ವಾಲ್ಮೀಕಿ, ಯಮನೂರಪ್ಪ ನಡೂಲಮನಿ, ಹುಲ್ಲಣಸಾ ತುಳಸಿಕಟ್ಟಿ ಇತರರು ಇದ್ದರು. 
ಕೊಪ್ಪಳ

ಕ್ಷತ್ರಿಯ ಸಮಾಜಕ್ಕೆ ಹೆಚ್ಚಿನ ಸೌಲಭ್ಯ ಲಭಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಆಶಯ
  • ಯಲಬುರ್ಗಾದಲ್ಲಿ ಜಗದಂಬಾದೇವಿ ವಾರ್ಷಿಕೋತ್ಸವ
ಯಲಬುರ್ಗಾ: ಕ್ಷತ್ರಿಯ ಸಮಾಜದ ಜನರು ಶ್ರಮಜೀವಿಗಳು. ಕಾಯಕವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜೀವನ ನಡೆಸಿಕೊಂಡು ಬಂದಿರುವ ಈ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಹೆಚ್ಚಿನ ಮಟ್ಟದಲ್ಲಿ ಸಿಗಬೇಕು ಎಂದು ತಾಲೂಕು ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ತಿಳಿಸಿದರು.
ಪಟ್ಟಣದ 15ನೇ ವಾರ್ಡಿನಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಜಗದಂಬಾದೇವಿ 14ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜವು ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕ ಎಂದರು.
ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಮಾತನಾಡಿ, ಕ್ಷತ್ರಿಯ ಸಮಾಜವು ಭಕ್ತಿ, ಶ್ರದ್ಧೆ ಹಾಗೂ ಶಿಸ್ತಿಗೆ ಹೆಸರಾಗಿದೆ. ಜನಸಂಖ್ಯೆಯಲ್ಲಿ ಸಣ್ಣದಾದರೂ ಎಲ್ಲ ಸಮಾಜದೊಂದಿಗೆ ಸಹೋದರತ್ವದಿಂದ ಬದುಕು ನಡೆಸುತ್ತಿದೆ ಎಂದರು.
ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಪೂಜೆ, ಪುನಸ್ಕಾರ ಹಾಗೂ ಪುಣ್ಯದ ಕಾರ್ಯಗಳಿಂದ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಜಗದಂಬಾದೇವಿ ಶಕ್ತಿ ದೇವತೆಯಾಗಿದ್ದು, ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದರು.
ಸಮಾಜದ ಮುಖಂಡರಾದ ಮನೋಹರಸಾ ರಂಗ್ರೇಜ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಅಮರೇಶ ಹುಬ್ಬಳ್ಳಿ, ವಸಂತಕುಮಾರ ಭಾವಿಮನಿ, ಟಿ.ಜೆ.ದಾನಿ, ದೇವಪ್ಪ ವಾಲ್ಮೀಕಿ, ಯಮನೂರಪ್ಪ ನಡೂಲಮನಿ, ಹುಲ್ಲಣಸಾ ತುಳಸಿಕಟ್ಟಿ, ಕಳಕಪ್ಪ ತಳವಾರ, ಪಿ.ಟಿ.ಉಪ್ಪಾರ, ನರಸಿಂಗಸಾ ಕಾಟವಾಡ, ಪ್ರಕಾಶ ದಲಬಂಜನ, ಚಿನ್ನುಸಾ ರಾಯಭಾಗಿ, ಹೊನ್ನುಸಾ ದಲಬಂಜನ, ರಾಜು ಮೇರವಾಡ, ಮುತ್ತು ಹನುಮಸಾಗರ, ಅರ್ಚಕ ಜಾನಕಸಾ ರಾಜೋಳ್ಳಿ, ಮಹಿಳಾ ಘಟಕದ ಕವಿತಾ ರಾಯಭಾಗಿ, ಯಮುನಾ, ಕೃತಿಕಾ, ಅಶೋಕ ರಾಯಭಾಗಿ, ಮೋತಿಲಾಲ, ದೀಪು ರಾಯಭಾಗಿ, ಸುರೇಶ ಮೇರವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.