ಬಂದಿರುವ ಪ್ರಶ್ನೆಪತ್ರಿಕೆ 
ಕೊಪ್ಪಳ

ಪ್ರಶ್ನೆಯಲ್ಲ, ಪ್ರಶ್ನೆಪತ್ರಿಕೆ ಮಾದರಿಯೇ ತಪ್ಪು !

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ವಿವಿ ಪರೀಕ್ಷಾ ಅವಾಂತರ
  • ಮರು ಎಕ್ಸಾಂಗೆ ವಿದ್ಯಾರ್ಥಿಗಳ ಆಗ್ರಹ
ಕೊಪ್ಪಳ : ಕೊಪ್ಪಳ ವಿಶ್ವವಿದ್ಯಾಲಯ ಸದಾ ವಿವಾದಗಳ ಮೂಲಕ ಸುದ್ದಿಯಾಗುತ್ತಿದೆ. ಇತ್ತೀಚೆಗೆ ನಡೆದ ಸ್ನಾತಕೋತ್ತರ ವಿಷಯ ಪರೀಕ್ಷೆಯಲ್ಲಿ ಪ್ರಶ್ನೆಗಳು ತಪ್ಪಾಗಿರುವುದು ಅಲ್ಲ, ಪ್ರಶ್ನೆಪತ್ರಿಕೆ ಮಾದರಿಯೇ ಅದಲು&ಬದಲಾಗಿದೆ ! ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೀಡಾಗಿದ್ದು ಮರು ಪರೀೆಗೆ ಆಗ್ರಹಿಸಿದ್ದಾರೆ.
ವಿವಿ ತನ್ನ ಪರೀಾ ಆದೇಶದಲ್ಲಿ ಪ್ರಶ್ನೆ ಪತ್ರಿಕೆ ಮಾದರಿ ವಿವರಾತ್ಮಕವಾಗಿ ಇರಲಿದೆ ಎಂದು ಸ್ಪಷ್ಟಪಡಿಸಿತ್ತು. ಆದರೆ, ಪರೀೆಗೆ ತೆರಳಿದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಕಂಡು ಕ್ಷಣಕಾಲ ದಂಗಾಗಿದ್ದಾರೆ. ವಿವರಾಣಾತ್ಮಕ ಮಾದರಿ ಬದಲು ಬಹುಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. ವಿವರಣಾತ್ಮಕವಾಗಿ ಓದಿಕೊಂಡು ಅದೇ ಮಾದರಿಯಲ್ಲಿ ಉತ್ತರ ಬರೆಯಲು ಬಂದವರು, ಬಹುಆಯ್ಕೆ ಕಂಡು ಯಾವುದು ನಿಖರ ಉತ್ತರವೆಂದು ಕ್ಷಣಕಾಲ ಗಾಬರಿಗೊಂಡಿದ್ದಾರೆ.
ವಿಶೇಷವಾಗಿ ಪತ್ರಿಕೋದ್ಯಮ ವಿಷಯವನ್ನು ಮುಕ್ತ ಆಯ್ಕೆಯಾಗಿ ತೆಗೆದುಕೊಂಡವರಿಗೆ ವಿವರಣಾತ್ಮಕ ಪ್ರಶ್ನೆ ಪತ್ರಿಕೆ ನೀಡಬೇಕಿತ್ತು. ಅದರ ಬದಲು ಬಹು ಆಯ್ಕೆ ಪ್ರಶ್ನೆಪತ್ರಿಕೆ ನೀಡಿದ್ದಾರೆ. ಸಮಾಜಶಾಸ್ತ್ರ ವಿಭಾಗದ ಮುಕ್ತ ಆಯ್ಕೆ ವಿಷಯದವರಿಗೆ ಬಹು ಆಯ್ಕೆ ಪ್ರಶ್ನೆಪತ್ರಿಕೆ ಬದಲು ವಿವರಣಾತ್ಮಕ ಪ್ರಶ್ನೆಪತ್ರಿಕೆ ನೀಡಿದ್ದಾರೆ. ಇದರಿಂದ ಕೆಲಕಾಲ ಗೊಂದಲ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪ್ರಕಟಿತ ಮಾದರಿಯನ್ನು ಆಧರಿಸಿ ಪ್ರಶ್ನೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಸಂಪೂರ್ಣ ಭಿನ್ನ ಮಾದರಿಯ ಪ್ರಶ್ನೆಪತ್ರಿಕೆ ದೊರೆತಿದೆ. ಇದರಿಂದ ಹಲವು ವಿದ್ಯಾರ್ಥಿಗಳು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದೇ ಸಂಕಷ್ಟ ಅನುಭವಿಸಿದ್ದಾರೆ.
ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಆಡಳಿತದ ರ್ನಿಲಕ್ಷ್ಯದಿಂದ ಉಂಟಾದ ಗಂಭೀರ ಲೋಪ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನೆಗಳ ಕಠಿಣತೆಯ ಬಗ್ಗೆ ಅಲ್ಲ, ಪ್ರಶ್ನೆಪತ್ರಿಕೆಯ ಮಾದರಿಯಲ್ಲಿಯೇ ದೋಷವಾಗಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಅಥವಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಪರೀಕ್ಷಾ ನಿಯಂತ್ರಕರನ್ನು ಆಗ್ರಹಿಸಿದ್ದಾರೆ. ವಿಶ್ವವಿದ್ಯಾಲಯವು ತಕ್ಷಣ ಸ್ಪಷ್ಟನೆ ನೀಡಿ ವಿದ್ಯಾರ್ಥಿಗಳ ಗೊಂದಲ ನಿವಾರಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಉತ್ತರ ಪತ್ರಕೆ ಬದಲಾವಣೆ

ಮೊದಲು ಕೊಪ್ಪಳ ವಿವಿ ನೀಡಿದ ಪ್ರಶ್ನೆ ಪತ್ರಕೆ ಮಾದರಯಂತೆ ಪ್ರಶ್ನೆ ಪತ್ರಕೆ ಬರುತ್ತದೆ ಎಂದು ತಿಳಿದ ಮೇಲ್ವಿಚಾರಕರು, ಸಮಾಜಶಾಸ್ತ್ರ ವಿಷಯ ಮುಕ್ತ ಆಯ್ಕೆಯಾಗಿ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಓಎಂಆರ್​ ಸೀಟ್​ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಮುಕ್ತ ಆಯ್ಕೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಉತ್ತರ ಪತ್ರಕೆ ನೀಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಆತುರದಲ್ಲಿ ಉತ್ತರ ಪತ್ರಿಕೆಯ ಮೇಲೆ ತಮ್ಮ ತಮ್ಮ ನೋಂದಣಿ ಸಂಖ್ಯೆಯನ್ನು ನಮೋದಿಸಿದ್ದರು. ಪ್ರಶ್ನೆಪತ್ರಿಕೆಯ ಬದಲಾವಣೆಗಳನ್ನು ಕಂಡ ಕೂಡಲೆ ಆ ಉತ್ತರ ಪತ್ರಕೆಗಳನ್ನು ಬದಾಲಾಯಿಸಿ ನೋಂದಣಿ ಸಂಖ್ಯೆ ಹಾಕಿರುವುದಕ್ಕೆ ವೈಟ್ನರ್​ ಹಾಕಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
"

ವಿಶ್ವವಿದ್ಯಾಲಯ ಪ್ರಕಟಿಸಿದ್ದ ಪ್ರಶ್ನೆಪತ್ರಿಕೆ ಮಾದರಿಯನ್ನು ನಂಬಿಕೊಂಡು ನಾವು ವಿವರಣಾತ್ಮಕ ಪ್ರಶ್ನೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಪರೀಕ್ಷಾ ಕೊಠಡಿಯಲ್ಲಿ ಬಹು ಆಯ್ಕೆ ಪ್ರಶ್ನೆಪತ್ರಿಕೆ ನೀಡಿರುವುದು ನಮ್ಮನ್ನು ಸಂಪೂರ್ಣ ಗೊಂದಲಕ್ಕೆ ಸಿಲುಕಿಸಿತು. ಇದು ನಮ್ಮ ತಪ್ಪಲ್ಲ, ವಿಶ್ವವಿದ್ಯಾಲಯದ ಲೋಪ. ಹೀಗಾಗಿ ಈ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಿ ಎಲ್ಲ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು.

— ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿ

"

ನಮ್ಮಲ್ಲಿ ಸೂಕ್ತ ಸಿಬ್ಬಂದಿ ಕೊರತೆಯಿಂದ ಪ್ರಶ್ನೆ ಪತ್ರಿಕೆ ತಯಾರಿ ಮಾಡಲು ಬೇರೊಂದು ವಿವಿಗೆ ವಹಿಸಿದ್ದು. ಇಂತಹ ಲೋಪಕ್ಕೆ ಕಾರಣವಾಗಿದೆ. ಪತ್ರಿಕೋದ್ಯಮ ವಿಫಿಯದ ಮುಕ್ತ ಆಯ್ಕೆ ಪರೀಕ್ಷೆಯನ್ನು ರದ್ದುಪಡಿಸಿ. ಮರು ಪರೀಕ್ಷೆ ನಡೆಸಲು ತಿಮಾರ್ನಿಸಲಾಗಿದೆ.

— ರಮೇಶ ಮೌಲ್ಯಮಾಪನ ಕುಲಪತಿ ಕೊಪ್ಪಳ ವಿವಿ


ಮಾದರಿ ಪ್ರಶ್ನೆಪತ್ರಿಕೆ