ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಭೇಟಿ ನೀಡಿದ್ದ ಇಸ್ರೇಲ್ನ ಹೀಲಾ, ನೊಯಿಂ ದಂಪತಿ .
- ವಿದೇಶಿಗರಲ್ಲೂ ಬೆಳೆದ ಆಸಕ್ತಿ
ಕೊಪ್ಪಳ: ದಕ್ಷಿಣ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರೆಗೆ ವಿದೇಶಿಗರು ಸಹ ಬರುತ್ತಿರುವುದು ವಿಶೇಷ. ಕಳೆದೆರಡು ದಿನದಿಂದ ಅಮೆರಿಕಾ, ಇಸ್ರೇಲ್ ಪ್ರಜೆಗಳು ಆಗಮಿಸಿ ಜಾತ್ರೋತ್ಸವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ವ ಪಾರಂಪರಿಕ ತಾಣವಾದ ಹಂಪಿ, ಆನೆಗೊಂದಿ, ಅಂಜನಾದ್ರಿ ಭಾಗಕ್ಕೆ ವಿದೇಶಿಗರು ಬರುವುದು ಸಾಮಾನ್ಯ. ಜ.5ರಿಂದ ಅಜ್ಜನ ಜಾತ್ರೆ ಆರಂಭವಾಗಿದ್ದು ಜ.18ವರೆಗೆ ಮುಂದುವರೆಯಲಿದೆ. ಕಳೆದೆರಡು ದಿನದಿಂದ ವಿದೇಶಿ ಪ್ರಜೆಗಳು ಗವಿಮಠ ಜಾತ್ರೆಗೆ ಬರುತ್ತಿರುವುದು ವಿಶೇಷ. ಇಸ್ರೇಲ್ ದಂಪತಿ ಹೀಲಾ, ನೊಯಿಂ ದಂಪತಿ ಕುಟುಂಬ ಸಮೇತ ಆಗಮಿಸಿ ಗವಿಸಿದ್ಧೇಶ್ವರನ ದರ್ಶನ ಪಡೆದು ಪ್ರಸಾದ ಸೇವಿಸಿದರು. ಜಾತ್ರೆಯಲ್ಲಿ ತಿರುಗಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.