ಕನಕಗಿರಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಮಾಲಾಧಾರಿಗಳಿಗೆ ಇರುಮುಡಿ ಕಟ್ಟಲಾಯಿತು. ಗುರುಸ್ವಾಮಿಗಳಾದ ಅನಿಲ ಬಿಜ್ಜಳ, ಶಿವಕುಮಾರ, ದಾಸ ಸ್ವಾಮಿ ಇತರರಿದ್ದರು.
- ಅಯ್ಯಪ್ಪಸ್ವಾಮಿ
- ಶಬರಿಮಲೈ
- ವ್ರತಾಚರಣೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಇರುಮುಡಿ
ಕನಕಗಿರಿ: ಅಯ್ಯಪ್ಪಸ್ವಾಮಿ ವ್ರತಾಚರಣೆ ಕೈಗೊಂಡು ಶಬರಿಮಲೈಗೆ ತೆರಳುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ತಾವರಗೇರಾ ರಸ್ತೆಯ ಎಪಿಎಂಸಿ ಪ್ರಾಂಗಣದಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಇರುಮುಡಿ ಕಾರ್ಯಕ್ರಮ ಆಯೊಜಿಸಲಾಗಿತ್ತು.
ಇರುಮುಡಿ ಕಾರ್ಯಕ್ರಮ ನಿಮಿತ್ತ ಮಂಗಳವಾರ ರಾತ್ರಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದಲ್ಲಿನ ಅಯ್ಯಪ್ಪಸ್ವಾಮಿ, ಗಣೇಶ, ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹೂಗಳಿಂದ ಅಲಂಕರಿಸಲಾಗಿತ್ತು.
ಗುರುಸ್ವಾಮಿಗಳಾದ ಅನಿಲ ಬಿಜ್ಜಳ, ಶಿವಕುಮಾರ, ದಾಸ ಸ್ವಾಮಿ 170 ಮಾಲಾಧಾರಿಗಳಿಗೆ ಇರುಮುಡಿ ಕಟ್ಟಿದರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಸಂಜೆ ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ಮಾಲಾಧಾರಿಗಳು ಶಬರಿಮಲೈಗೆ ತೆರಳಿದರು.
ಪ್ರಮುಖರಾದ ಪಂಪಾಪತಿ ತುಪ್ಪದ, ಮೃತ್ಯುಂಜಯ ಸ್ವಾಮಿ, ಆನಂದ ಭತ್ತದ್, ನಿಂಗಪ್ಪ ಪೂಜಾರ, ಶರಣಪ್ಪ ಕನಕಾಪುರ, ನಾಗರಾಜ ಇದ್ಲಾಪುರ ಇತರರಿದ್ದರು.