ಕೊಪ್ಪಳದ ಗೊಂಡಬಾಳ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಸುಮಾರು 14.53 ಕೋಟಿ ರೂ. ವೆಚ್ಚದ ಅಭಿವೃದಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿ. ಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಗವಿಸಿದ್ದಪ್ಪ ಕರಡಿ, ಇಓ ದುಂಡೇಶ ತುರಾದಿ, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ವಿರುಪಣ್ಣ ಕುರುಬರು, ತೋಟಪ್ಪ ಕಾಮನೂರು, ಕೆ. ಎಂ ಸೈಯದ್,ಹನಮೇಶ ಹೊಸಳ್ಳಿ ಇದ್ದರು.
- ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಭಿಪ್ರಾಯ
ಕೊಪ್ಪಳ: ನೀರಾವರಿ ಯೋಜನೆಗಳು ಕೇವಲ ಅಭಿವೃದ್ಧಿಯ ಸಂಕೇತವಲ್ಲ, ಅವು ಈ ಭಾಗದ ರೈತರ ಆರ್ಥಿಕ ಸಬಲೀಕರಣದ ಭದ್ರ ಬುನಾದಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಗೊಂಡಬಾಳ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಸುಮಾರು 14.53 ಕೋಟಿ ರೂ. ವೆಚ್ಚದ ಅಭಿವೃದಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಕರ್ಕಿಹಳ್ಳಿ, ಚಿಕ್ಕಬಗನಾಳ ಮತ್ತು ಹಿರೇಬಗನಾಳ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. 8.20 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಸುಮಾರು 932 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಲಾಚನಕೇರಿ ಗ್ರಾಮದಲ್ಲಿ 2.80 ಕೋಟಿ ರೂ. ವೆಚ್ಚದಲ್ಲಿ 344 ಎಕರೆ ಪ್ರದೇಶಕ್ಕೆ ನೀರುಣಿಸುವ ಕಾಮಗಾರಿಗೂ ಚಾಲನೆ ನೀಡಲಾಗಿದ್ದು, ಇದು ರೈತರಿಗೆ ವರದಾನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ನೀರಾವರಿ ಮಾತ್ರವಲ್ಲದೆ, ಗ್ರಾಮಗಳ ಮೂಲಸೌಕರ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ. ಕುಣಿಕೇರಿ ತಾಂಡಾ, ಅಲ್ಲಾನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 1.81 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳ ನಿಮಾರ್ಣಕ್ಕೆ ಚಾಲನೆ ನೀಡಲಾಗಿದೆ. ಶೋಷಿತ ವರ್ಗದ ರೈತರಿಗಾಗಿ ತುಂಗಭದ್ರಾ ಹಿನ್ನೀರಿನಿಂದ ಏತ ನೀರಾವರಿ ಒದಗಿಸಲು ವಿಶೇಫಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿ. ಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಗವಿಸಿದ್ದಪ್ಪ ಕರಡಿ, ಇಓ ದುಂಡೇಶ ತುರಾದಿ, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ವಿರುಪಣ್ಣ ಕುರುಬರು, ತೋಟಪ್ಪ ಕಾಮನೂರು, ಕೆ. ಎಂ ಸೈಯದ್,ಹನಮೇಶ ಹೊಸಳ್ಳಿ, ಜಗದೀಶ ಕರ್ಕಿಹಳ್ಳಿ, ಗವಿಸಿದ್ದಪ್ಪ ಕುಂಬಾರ, ಅಸ್ಮಾನ್ ಸಾಬ್ ಇತರರಿದ್ದರು.