ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶಾಲಾ ಸಂಸತ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಸೋಮವಾರ ಉದ್ಘಾಟಿಸಿದರು. ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ವ್ಯವಸ್ಥಾಪಕ ನಿರ್ದೇಶಕಿ ಡಾ.ನೆಕ್ಕಂಟಿ ಅಖಿಲಾ, ಸಿಇಒ ನರೇಶ, ಉಪಪ್ರಾಚಾರ್ಯೆ ಜೆ.ಲಕ್ಷ್ಮೀ ಇತರರಿದ್ದರು. 
ಕೊಪ್ಪಳ

ಸ್ವಯಂ ಶಿಸ್ತು-ಸ್ವಚ್ಛತೆಗೆ ಆದ್ಯತೆ ನೀಡಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಸಲಹೆ
ಗಂಗಾವತಿ; ಸಮಾಜಮುಖಿ ಚಿಂತನೆಗಳೊಂದಿಗೆ ನಾಯಕತ್ವ ಗುಣಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ಬೆಳೆಸಿಕೊಳ್ಳುವಂತೆ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜವಾಬ್ದಾರಿ ಅರಿವು ಅಧ್ಯಯನ ಶೀಲರಾಗಬೇಕಿದ್ದು, ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು. ಜವಾಬ್ದಾರಿ ಅರಿತು ಉತ್ತಮ ನಾಯಕರಾಗಲು ಕಾರ್ಯೋನ್ಮುಖರಾಗಬೇಕು. ಸ್ವಯಂ ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದ್ದು, ಪಾಲಕರು, ಗುರುಹಿರಿಯನ್ನು ಗೌರವಿಸುವ ಗುಣ ಹೊಂದಿರಬೇಕು. ಪರಿಸರ ಕಾಳಜಿಯೊಂದಿಗೆ ಸಮಾಜದ ಪ್ರಗತಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ಪೌರರಾಗಿ ಎಂದರು.
ಚುನಾಯಿತರಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ನಾಯಕತ್ವದ ಬ್ಯಾಡ್ಜ್‌ಗಳನ್ನು ವಿತರಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ವ್ಯವಸ್ಥಾಪಕ ನಿರ್ದೇಶಕಿ ಡಾ.ನೆಕ್ಕಂಟಿ ಅಖಿಲಾ, ಸಿಇಒ ನರೇಶ, ಉಪ ಪ್ರಾಚಾರ್ಯೆ ಜೆ.ಲಕ್ಷ್ಮೀ, ಕ್ಯಾಂಪಸ್ ವ್ಯವಸ್ಥಾಪಕ ಜಿ.ನಾಗೇಶ್ವರರಾವ್, ಪಿಆರ್‌ಎಂ ನಿಂಗಪ್ಪ, ಕಾರ್ಯದರ್ಶಿ ಮಂಜುನಾಥ, ಪಿಆರ್‌ಒ ಮಲ್ಲನಗೌಡ ಪಾಟೀಲ್, ವಸತಿ ನಿಲಯದ ಮುಖ್ಯಸ್ಥ ಕಾಳೇಶ, ಶಿಕ್ಷಕರಾದ ವಿಜಯಕುಮಾರ, ಅಮೃತಾ, ವಿದ್ಯಾರ್ಥಿನಾಯಕಿ ಲಕ್ಷ್ಮೀ ಪ್ರಸನ್ನ ಇತರರಿದ್ದರು.