ಗಂಗಾವತಿ ಸಿಬಿಎಸ್ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಡಗ್ಗಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ದುರುಗಮ್ಮ ಹೊಸ್ಕೇರಿ, ಶಿವಕುಮಾರ ಈಚನಾಳ್, ಕೃಷ್ಣಪ್ಪ, ಮಂಜುನಾಥ, ಮೇರಿ ಇತರರಿದ್ದರು. 
ಕೊಪ್ಪಳ

ಹಕ್ಕು ಮೊಟಕುಗೊಳಿಸುವ ಹುನ್ನಾರ

ಪ್ರಮುಖ ಮುಖ್ಯಾಂಶಗಳು

  • ಕಪ್ಪು ಪಟ್ಟಿ
  • ಕಟ್ಟಿಕೊಂಡು
  • ಸದಸ್ಯರು
ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರು ನಗರದ ಸಿಬಿಎಸ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಂಗ ಸಂಘಟನೆಗಳ ಸಹಯೋಗದೊಂದಿಗೆ ಕೈಗೆ ಕಪ್ಪು ಪಟ್ಟಿಕಟ್ಟಿಕೊಂಡು ಪ್ರತಿಭಟಿಸಿದ ಸದಸ್ಯರು ಬೇಡಿಕೆ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಮನವಿ ಸಲ್ಲಿಸಿದರು.
ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಏ.1ರಿಂದ ಜಾರಿಯಾಗುವಂತೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರವಿದೆ. ವ್ಯವಹಾರ ಸುಲಭೀಕರಣ ನೆಪದಲ್ಲಿ ಕಾರ್ಪೋರೇಟ್ ಕಂಪನಿ ಪರವಾಗಿ ನೀತಿ ಜಾರಿಗೊಳಿಸಿದೆ.
ಇದರಿಂದ ನೋಂದಣಿ ಕಷ್ಟಕರವಾಗಲಿದ್ದು, ರದ್ಧತಿ ಸುಲಭವಾಗಲಿದೆ. ಸಾಮಾಜಿಕ ಭದ್ರತಾ ವ್ಯವಸ್ಥೆ ದುರ್ಬಲಗೊಳಿಸುವುದು, ಸುರಕ್ಷತಾ ನಿಯಮಕ್ಕೆ ಕತ್ತರಿ, ಕಾಯಂ ಅವಧಿಯ ಉದ್ಯೋಗಗಳನ್ನು ಇಲ್ಲವಾಗಿಸುವುದು, ಕೆಲಸದ ಅವಧಿ ಮಿತಿ ಇಲ್ಲದಂತೆ ದುಡಿಸಿಕೊಳ್ಳುವುದು ಸೇರಿ ಇತರೆ ಅಂಶಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಲಿವೆ. ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿದ ದಿನವನ್ನು ಕರಾಳ ದಿನವನ್ನಾಗಿ ಕಾರ್ಮಿಕ ಸಂಘಟನೆಗಳು ಅಚರಿಸುತ್ತಿದ್ದು, ಹೋರಾಟ ಮುಂದುವರಿಯಲಿದೆ ಎಂದರು.