ಗಂಗಾವತಿ ಶ್ರೀರಾಮಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪದವಿ ಪ್ರದಾನ ಮತ್ತು ತಲೆಮಾರುಗಳ ಹಬ್ಬ, ಬಂಧುಗಳ ಸಂಭ್ರಮದಲ್ಲಿ ಅಜ್ಜಿಯಂದಿರನ್ನು ಸನ್ಮಾನಿಸಲಾಯಿತು. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಎಂಡಿ ಡಾ. ಅಖಿಲಾ ನೆಕ್ಕಂಟಿ, ಸಿಇಒ ವೈ. ನರೇಶ್ ಇತರರಿದ್ದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಸಲಹೆ
ಗಂಗಾವತಿ: ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳಿಗೆ ಪಾಲಕರು ನೀಡಬೇಕಿದ್ದು, ನೈತಿಕ ಮೌಲ್ಯಗಳನ್ನು ಹೇಳಿಕೊಡಬೇಕಿದೆ ಎಂದು ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಸಲಹೆ ನೀಡಿದರು.
ತಾಲೂಕಿನ ಶ್ರೀರಾಮಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡ ಪದವಿ ಪ್ರದಾನ ಮತ್ತು ತಲೆಮಾರುಗಳ ಹಬ್ಬ, ಬಂಧುಗಳ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ತಂದೆ-ತಾಯಿ, ಅಜ್ಜ-ಅಜ್ಜಿಯಂದಿರನ್ನು ಹಾಗೂ ಗುರು-ಹಿರಿಯರನ್ನು, ಕುಟುಂಬವನ್ನು ಗೌರವಿಸುವ ಮತ್ತು ಪ್ರೀತಿಸುವಂತಹ ಸಂಸ್ಕಾರ ಬೆಳೆಸಲು ಯತ್ನಿಸಬೇಕು. ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಮತ್ತು ಅಜ್ಜ-ಅಜ್ಜಿಯಂದಿರ ಪಾತ್ರ ಬಹುಮುಖ್ಯವಾಗಿದ್ದು, ಪ್ರೀತಿಯ ಹಾರೈಕೆ, ಕಥೆಗಳು, ನೀತಿ ಪಾಠಗಳ ಮೂಲಕ ಮಕ್ಕಳಲ್ಲಿ ಉತ್ತಮ್ಮ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಡಾ.ಲಕ್ಷ್ಮಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುತ್ತಿದೆ ಎಂದರು.
ಮುತ್ತಜ್ಜ, ಮುತ್ತಜ್ಜಿಯರನ್ನು ಸನ್ಮಾನಿಸಲಾಯಿತು. ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪ್ರಮಾಣ ಪತ್ರ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಮುಖಂಡರಾದ ಐ.ವೆಂಕಟರಾವ್, ವಿಜಯಲಕ್ಷ್ಮೀ, ಭೀಮಸೇನ್‌ರಾವ್ ಕುಲ್ಕರ್ಣಿ, ಎನ್.ಗೋಪಾಲ ಕಷ್ಣ, ಪಿಲ್ಲಿ ಕೊಂಡಯ್ಯ, ವಿಶ್ವೇಶ್ವರ್‌ರಾವ್, ಸತ್ಯವತಿ, ಸಿ.ಎಚ್ ಗುರುಪ್ರಸಾದರಾವ್, ಶಂಕುತಲಾ, ಶಂಕ್ರಪ್ಪ ಬಸಾಪಟ್ಟಣ, ಲಕ್ಷ್ಮಣ ಈಳಿಗನೂರು, ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಎಂಡಿ ಡಾ.ಅಖಿಲಾ ನೆಕ್ಕಂಟಿ, ಸಿಇಒ ವೈ. ನರೇಶ, ಶೈಕ್ಷಣಿಕ ಮುಖ್ಯಸ್ಥೆ ಎಸ್.ಕಷ್ಣವೇಣಿ, ಕ್ಯಾಂಪಸ್ ಮ್ಯಾನೇಜರ್ ಜಿ. ನಾಗೇಶ್ವರ್‌ರಾವ್, ಉಪಪ್ರಾಚಾರ್ಯೆ ಜೆ.ಲಕ್ಷ್ಮೀ , ಪಿಅರ್‌ಎಂ ನಿಂಗಪ್ಪ, ಮಂಜುನಾಥ, ಮುಖ್ಯನಿಲಯ ಪಾಲಕ ಕಾಳೇಶ, ಪಿಆರ್‌ಒ ಮಲ್ಲನಗೌಡ ಪಾಟೀಲ್ ಇತರರಿದ್ದರು.