ಶಾಲಾ ಕಾಲೇಜುಗಳು, ಜೆಸ್ಕಾಂ ಕಚೇರಿಯಲ್ಲಿ ಬಯೋಮೆಟ್ರಿಕ್​ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿ ಜನಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್​.ಎ.ಗಫಾರ್​, ಬಸವರಾಜ ಶೀಲವಂತರ್​, ಚನ್ನಬಸಪ್ಪ ಅಪ್ಪಣವರ, ಮಖಬೂಲ್​ ರಾಯಚೂರು, ಶಿವಪ್ಪ ಹಡಪದ ಇದ್ದರು.  
ಕೊಪ್ಪಳ

ಶಾಲಾ-ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ

ಪ್ರಮುಖ ಮುಖ್ಯಾಂಶಗಳು

  • ಜನಪರ ಸಂಟನೆಗಳ ಒಕ್ಕೂಟದಿಂದ ಮನವಿ
  • ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಕೆ
ಕೊಪ್ಪಳ: ಜಿಲ್ಲೆಯ ಶಾಲಾ ಕಾಲೇಜುಗಳು, ಜೆಸ್ಕಾಂ ಕಚೇರಿಯಲ್ಲಿ ಬಯೋಮೆಟ್ರಿಕ್​ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿ ಜನಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು.
ಶಾಲಾ&ಕಾಲೇಜುಗಳಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಬೋಧನಾ ಅವಧಿ ಮುಗಿವ ಮುಂಚೆಯೇ ಶಾಲೆಯಿಂದ ತೆರಳುತ್ತಾರೆ. ಇದರಿಂದ ಮಕ್ಕಳಿಗೆ ಸರಿಯಾಗಿ ಬೋಧನೆ ಸಿಗುತ್ತಿಲ್ಲ. ಜೆಸ್ಕಾಂ ಕಚೇರಿಗಳಲ್ಲೂ ಅಧಿಕಾರಿ, ಸಿಬ್ಬಂದಿ ಸರಿಯಾಗಿ ಇರುವುದಿಲ್ಲ. ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಶಾಲಾ&ಕಾಲೇಜುಗಳಲ್ಲಿ ಬಯೋಮೆಟ್ರಿಕ್​ ಕಡ್ಡಾಯಗೊಳಿಸಿ. ಕೆಟ್ಟಲ್ಲಿ ತಕ್ಷಣ ರಿಪೇರಿ ಮಾಡಿಸುವಂತೆ ಸೂಚಿಸಿ. ಶಿಕ್ಷಕರ ಚಲನವಲನದ ಮೇಲೆ ನಿಗಾವಹಿಸಬೇಕು. ಜೆಸ್ಕಾಂ ಕಚೇರಿಗಳಲ್ಲೂ ಸಿಸಿಟಿವಿ ಕ್ಯಾಮರಾ, ಬಯೋಮೆಟ್ರಿಕ್​ ಹಾಜರಾತಿ ಕಡ್ಡಾಯಗೊಳಿಸಿ. ಕಚೇರಿ ಅವಧಿಯಲ್ಲಿ ಹೊರ ಹೋಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಮುಖರಾದ ಎಸ್​.ಎ.ಗಫಾರ್​, ಬಸವರಾಜ ಶೀಲವಂತರ್​, ಚನ್ನಬಸಪ್ಪ ಅಪ್ಪಣವರ, ಮಖಬೂಲ್​ ರಾಯಚೂರು, ಶಿವಪ್ಪ ಹಡಪದ ಇತರರಿದ್ದರು.