ಗಂಗಾವತಿ ಇನ್ನರ್ ವ್ಹೀಲ್ ಕ್ಲಬ್ ಕಚೇರಿಯಲ್ಲಿ ಜಿಲ್ಲಾ ಚೇರ್‌ಮನ್ ಜಯಶ್ರೀ ಅವರನ್ನು ಭಾನುವಾರ ಸನ್ಮಾನಿಸಲಾಯಿತು. ಕ್ಲಬ್ ತಾಲೂಕಾಧ್ಯಕ್ಷ ಸವಿತಾ ಸವಡಿ, ಕಾರ್ಯದರ್ಶಿ ಅಸ್ಮಾ ರಹೀನ್, ಐಎಸ್‌ಒ ಸುಜಾತಾ ರೆಡ್ಡಿ ಇತರರಿದ್ದರು. 
ಕೊಪ್ಪಳ

ದುರ್ಬಲ ವರ್ಗಗಳ ಸಹಾಯಕ್ಕೆ ನಿರ್ಧಾರ

ಗಂಗಾವತಿ: ಇನ್ನರ್ ವ್ಹೀಲ್ ಕ್ಲಬ್ ಸ್ಥಳೀಯ ಶಾಖೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿ ಚಟುವಟಿಕೆಗಳನ್ನು ಮುಂದುವರಿಸುವಂತೆ ಕ್ಲಬ್ ಕೊಪ್ಪಳ ಜಿಲ್ಲಾ ಚೇರ್‌ಮನ್ ಜಯಶ್ರೀ ಸಲಹೆ ನೀಡಿದರು.
ನಗರದ ಕ್ಲಬ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಸಮಾಜದಲ್ಲಿನ ವಿವಿಧ ಸಮಸ್ಯೆಗಳು, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಸೇವಾ ಯೋಜನೆಗಳ ಕುರಿತು ಚಿಂತನೆ ನಡೆಸಲಾಯಿತು. ದುರ್ಬಲ ವರ್ಗಗಳಿಗೆ ಹೆಚ್ಚಿನ ಸಹಾಯ ಒದಗಿಸುವ ಬಗ್ಗೆ ನಿರ್ಧರಿಸಲಾಯಿತು.
ನಗರದಲ್ಲಿ ಕ್ಲಬ್‌ನಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ಲಬ್ ಅಂಗೀಕತ ಸರ್ಕಾರಿ ಶಾಲೆಯಲ್ಲಿ ಹ್ಯಾಪಿ ಸ್ಕೂಲ್ ಯೂನಿಟ್‌ಗೆ ಚಾಲನೆ ನೀಡಲಾಯಿತು. ಘಟಕದ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶವಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ನಗರದ ಸೌಂದರ್ರೀಕರಣ ಮತ್ತು ಆತಿಥ್ಯ ಮನೋಭಾವ ಉತ್ತೇಜಿಸುವುದಕ್ಕಾಗಿ ನಗರ ಪ್ರವೇಶಿಸುವ ಕೊಪ್ಪಳ ಸಂಪರ್ಕ ರಸ್ತೆಯಲ್ಲಿ ಸ್ವಾಗತ ಲಕ ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಚೇರ್‌ಮನ್ ಜಯಶ್ರೀಯರನ್ನು ಸ್ಥಳೀಯ ಶಾಖೆಯಿಂದ ಸನ್ಮಾನಿಸಲಾಯಿತು. ಕ್ಲಬ್ ತಾಲೂಕಾಧ್ಯಕ್ಷ ಸವಿತಾ ಸವಡಿ, ಕಾರ್ಯದರ್ಶಿ ಅಸ್ಮಾ ರಹೀನ್, ಐಎಸ್‌ಒ ಸುಜಾತಾ ರೆಡ್ಡಿ, ಎಡಿಟರ್ ಮಂಜುಳಾ, ಮಾಜಿ ಅಧ್ಯಕ್ಷೆ ಎಂ.ಪ್ರಿಯಾಕುಮಾರಿ, ಸತ್ತಿ ಹಿಮಾರೆಡ್ಡಿ, ಅರುಣಾವಸದ್ ಇತರರಿದ್ದರು.