ಗಂಗಾವತಿ ಕ್ರೀಡಾ ಮೈದಾನದ ಮುಂದೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ನಗರಸಭೆ ವಿಷಯ ನಿರ್ವಾಹಕ ಬಸವರಾಜ ಸುಳಕೋಡ್ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಕಾರ್ಯದರ್ಶಿ ದುರುಗೇಶ ಬರಗೂರು, ಪದಾಧಿಕಾರಿಗಳಾದ ಯಮನೂರ, ಚನ್ಮಮ್ಮ, ಯಮುನಾ, ಅಜೇಯ ಇತರರಿದ್ದರು.
- ಕರ್ನಾಟಕ
- ವಿದ್ಯಾರ್ಥಿ
- ಸಂಘಟನೆ
ಗಂಗಾವತಿ: ನಗರದ ಬಾಲಕರ ಸ.ಪ.ಪೂ.ಕಾಲೇಜಿನ (ಜ್ಯೂನಿಯರ್) ಕ್ರೀಡಾ ಮೈದಾನ ರಕ್ಷಿಸುವಂತೆ ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ತಾಲೂಕು ಸಮಿತಿ ಸದಸ್ಯರು ನಗರದ ಕ್ರೀಡಾ ಮೈದಾನದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ನಗರಸಭೆ ವಿಷಯ ನಿರ್ವಾಹಕ ಬಸವರಾಜ ಸುಳಕೋಡ್ ಅವರಿಗೆ ಸಲ್ಲಿಸಿದರು. ರಾಜ್ಯ ಕಾರ್ಯದರ್ಶಿ ದುರುಗೇಶ ಬರಗೂರು ಮಾತನಾಡಿ, ಇತಿಹಾಸದ ಕ್ರೀಡಾ ಮೈದಾನ ಒತ್ತುವರಿಗೊಳಗಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ಮೈದಾನ ವ್ಯಾಪ್ತಿಯಲ್ಲಿರುವ ನಾಲ್ಕು ಶಾಲೆ, ಕಾಲೇಜುಗಳಿಗೆ ಒಂದೇ ಕ್ರೀಡಾ ಮೈದಾನವಿದ್ದು, ುಡ್‌ಕೋರ್ಟ್ ನಿರ್ಮಾಣಕ್ಕೆ ಒತ್ತುವರಿಯಾದರೆ ಕ್ರೀಡೆ ನಡೆಸಲು ಜಾಗವೇ ಇರಲ್ಲ. ವಾಣಿಜ್ಯೀಕರಣ ಯೋಜನೆ ಕೈಬಿಡಬೇಕಿದ್ದು, ಮೈದಾನದಲ್ಲಿ ಯಾವುದೇ ನಿರ್ಧಾರ ಕೈಗೊಂಡರೂ ವಿದ್ಯಾರ್ಥಿ ಸಂಘಟನೆ ಮತ್ತು ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಬೇಕು. ಮೈದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಯಮನೂರ, ಚನ್ಮಮ್ಮ, ಯಮುನಾ, ಅಜೇಯ, ಕಾವ್ಯಾ, ಅರ್ಪಿತಾ, ಮಹೇಶ ಇತರರಿದ್ದರು.