ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಜೆಟ್ 2026 ಕುರಿತು ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಅರ್ಥಶಾಸಜ್ಞ ಕಲಬುರಗಿಯ ಡಾ.ವಾಸುದೇವ ಸೇಡಂ ಶುಕ್ರವಾರ ಉದ್ಘಾಟಿಸಿದರು. ಹೂವಿನ ಹಡಗಲಿ ಜಿಬಿಆರ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ಪಾಟೀಲ್, ಎಸ್‌ಕೆಎನ್‌ಜಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಜಿ.ಗುರಿಕಾರ್ ಇತರರಿದ್ದರು. 
ಕೊಪ್ಪಳ

ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಳ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಖರ್ಚಿನ ಪ್ರಮಾಣ
  • ಹೆಚ್ಚಳ

ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಳ

ಗಂಗಾವತಿ: ಅಭಿವೃದ್ಧಿಗೆ ಪೂರಕವಾದ ರಾಜ್ಯದ ಮುಂಗಡಪತ್ರ 4.48ಲಕ್ಷ ಕೋಟಿ ರೂ.ಗೆ ತಲುಪಿದ್ದು, ಸಾಲದ ಪ್ರಮಾಣವೂ ಹೆಚ್ಚಾಗಿದೆ ಎಂದು ಅರ್ಥಶಾಸಜ್ಞ ಕಲಬುರಗಿಯ ಡಾ.ವಾಸುದೇವ ಸೇಡಂ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ ಮತ್ತು ಐಕ್ಯೂಎಸಿ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಜೆಟ್ 2026 ಕುರಿತು ವಿಶೇಷ ಉಪನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬಜೆಟ್ ಅಂದ್ರೆ ಖರ್ಚು ವೆಚ್ಚದ ಮಾಹಿತಿ ಅಷ್ಟೇ ಅಲ್ಲ, ಜನರ ಕಲ್ಯಾಣ, ನಾಡಿನ ಅಭಿವದ್ಧಿಗೆ ದಿಕ್ಸೂಚಿ. ಸಾಲದ ಪ್ರಮಾಣ 8ಲಕ್ಷ ಕೋಟಿ ರೂ. ತಲುಪಿದ್ದು, ಆದಾಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿದೆ.
ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ. ದೀರ್ಘಕಾಲದ ಆಡಳಿತ ಅನುಭವದ ಮೇಲೆ ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸರ್ವರ ಕಲ್ಯಾಣದ ಆಶಯ ದಾರಿ ತಪ್ಪಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಬಜೆಟ್ ಮೂಲ ಉದ್ದೇಶವಾಗಬೇಕಿದೆ ಎಂದರು.
ಹೂವಿನ ಹಡಗಲಿ ಜಿಬಿಆರ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ಪಾಟೀಲ್ ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ ನೀಡಬೇಕು. ಬಜೆಟ್ ಗಾತ್ರ ದೊಡ್ಡದಾಗುತ್ತಿದ್ದಂತೆ ಆದಾಯದ ಗಾತ್ರ ಕಿರಿದಾಗುತ್ತಿದೆ. ಆಕರ್ಷಕ ಯೋಜನೆಗಳಿಗಿಂತ ದೂರದಷ್ಟಿ ಯೋಜನೆಗಳು ಲ ನೀಡಬಲ್ಲವು ಎಂದರು.
ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಅಬ್ದುಲ್ ರಹೆಮಾನ್, ಮಂಜುನಾಥ ಶೆಟ್ಟರ್ ಉಲವತ್ತಿ ಮಾತನಾಡಿದರು. ಪ್ರಾಚಾರ್ಯ ಡಾ. ಎಸ್.ಜಿ.ಗುರಿಕಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜೆ.ಕೃಷ್ಣ, ಸಹಾಯಕ ಪ್ರಾಧ್ಯಾಪಕರಾದ ಅಶ್ರ್ ಅಳ್ಳಳ್ಳಿ, ಅನಿತಾ, ದೊರೈಬಾಬು, ಅನಿಲಕುಮಾರ, ಅತಿಥಿ ಉಪನ್ಯಾಸಕರಾದ ಸುನಂದಾ, ಸತೀಶ, ಗುಂಡೂರು ಪವನ್ ಕುಮಾರ, ಡಾ.ಕೆ.ಎನ್. ರವಿ, ಮಂಜುಳಾ ಪಾಟೀಲ ಇತರರಿದ್ದರು.