ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಮಂಗಳವಾರ ಮಾತನಾಡಿದರು. ಸೀಡ್ಲಿಂಗ್ ಲ್ಯಾಬ್ ಸಿಇಒ ಶಾಂತಿ ಕುರುಪಾಟಿ, ಶ್ರೀ ವಿದ್ಯಾನಿಕೇತನ ಸಂಸ್ಥೆ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ ಇತರರಿದ್ದರು.
- ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಹೇಳಿಕೆ
- 36ಮಕ್ಕಳಿಗೆ ಪ್ರೋತ್ಸಾಹಧನ
ಗಂಗಾವತಿ: ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಕೋಟಿ ರೂ.ಗೂ ಹೆಚ್ಚು ಹಣವನ್ನು ಮೀಸಲಿಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಮಟ್ಟದಲ್ಲಿ ವಿದ್ಯಾನಿಕೇತನ ಸಂಸ್ಥೆ ಉತ್ತಮ ಸಾಧನೆ ಮಾಡಿದ್ದು, ಯು.ಶ್ರಾವಣಿ 2ನೇ ರ‌್ಯಾಂಕ್, ಅರ್ಜುನ ಗ್ವಾತಗಿ 3ನೇ, ವೈಷ್ಣವೀ 5ನೇ ರ‌್ಯಾಂಕ್ ಪಡೆಯುವುದರ ಜತೆಗೆ 36ವಿದ್ಯಾರ್ಥಿಗಳು ರ‌್ಯಾಂಕ್ ಪಟ್ಟಿಯಲ್ಲಿದ್ದಾರೆ. ಸಂಸ್ಥೆ ಸಾಧನೆ, ಉತ್ತರ ಕರ್ನಾಟಕ ವಿದ್ಯಾರ್ಥಿಗಳ ಗೆಲುವಾಗಿದ್ದು, ಹಿಂದುಳಿದ ಪಟ್ಟಿ ಅಳಿಸುವ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸುತ್ತಿದೆ. ಉತ್ತಮ ಲಿತಾಂಶ ಬರಲು ಸಂಸ್ಥೆ ಬೋಧಕ ವರ್ಗ ದಿನಕ್ಕೆ 16ರಿಂದ 18ಗಂಟೆ ಕೆಲಸ ಮಾಡಿದ್ದು, ವಿದ್ಯಾರ್ಥಿಗಳು ಭವಿಷ್ಯ ರೂಪಿಸಲು ಶ್ರಮಿಸುತ್ತಿದ್ದಾರೆ ಎಂದರು.
ಸೀಡ್ಲಿಂಗ್ ಲ್ಯಾಬ್ ಸಿಇಒ ಶಾಂತಿ ಕುರುಪಾಟಿ, ಶ್ರೀ ವಿದ್ಯಾನಿಕೇತನ ಸಂಸ್ಥೆ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ, ಪ್ರಾಚಾರ್ಯರಾದ ಜಗನ್ನಾಥರಾವ್, ಉಮಾಶಂಕರರಾವ್, ಮಲ್ಲಿಕಾರ್ಜುನ, ಅಭಿಷೇಕ, ಶೈಕ್ಷಣಿಕ ನಿರ್ದೇಶಕ ಎಂ.ನಳಿನಿ ಇತರರಿದ್ದರು.
ಉಚಿತ ಶಿಕ್ಷಣ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಆಗುವ 25 ವಿದ್ಯಾರ್ಥಿಗಳಿಗೆ ವಸತಿಯುತ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದು, ಜಿಲ್ಲೆಯ 7ತಾಲೂಕಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ, ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಸಂಸ್ಥೆಯ ಯಾವುದೇ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು. ಸಮವಸ, ಟ್ಯೂಷನ್ ಫೀ, ಸ್ಟಡಿ ಮಟೀರಿಯಲ್ ಸೇರಿ ಎಲ್ಲವೂ ಉಚಿತ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಅದರಂತೆ ಪಿಯುಸಿಯಲ್ಲಿ ರ‌್ಯಾಂಕ್ ಪಟ್ಟಿಯಲ್ಲಿರುವ 36ವಿದ್ಯಾರ್ಥಿಗಳಿಗೆ ತಲಾ ಲಕ್ಷ ರೂ.ಗಳ ಪ್ರೋತ್ಸಾಹಧನ ಚೆಕ್ ವಿತರಿಸಲಾಗುವುದು ಎಂದರು.
ಉಜ್ವಲ ಭವಿಷ್ಯದ ಭರವಸೆ, ಕಲಿಕಾ ವಾತಾವರಣ
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಗಮನಹರಿಸಿದ್ದು, ಉಜ್ವಲ ಭವಿಷ್ಯದ ಭರವಸೆಯೊಂದಿಗೆ ಕಲಿಕಾವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು. ಪಾಲಕ, ಶಿಕ್ಷಕ, ವಿದ್ಯಾರ್ಥಿಗಳ ಸಹಕಾರದೊಂದಿಗೆ ಉತ್ತಮ ಲಿತಾಂಶ ಪಡೆಯಲು ಸಾಧ್ಯವಾಗಿದ್ದು, ಸಂಸ್ಥೆ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಮುಂದಿನ ಶೈಕ್ಷಣಿಕ ವರ್ಷ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆಯುವ ವಿಶ್ವಾಸವಿದ್ದು, ನರ್ಸರಿ ಟೂ ನೌಕರಿ ಪರಿಕಲ್ಪನೆಗೆ ಈಗಾಗಲೇ ಗುರಿ ತಲುಪಿದ್ದು, ಕ್ಯಾಂಪಸ್ ಸೆಲೆಕ್ಷನ್‌ಗೂ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲೆಯ ಪ್ರತಿಭಾವಂತ ಬಡ ಮಕ್ಕಳ ಶಿಕ್ಷಣಕ್ಕೆ ಸಂಸ್ಥೆ ನೆರವಾಗುತ್ತಿದ್ದು, ತಾಲೂಕಿಗೆ ಟಾಪರ್ ಆಗಿರುವ ವಿದ್ಯಾರ್ಥಿಗಳಿಗೆ ವಸತಿಯುತ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು. ಶ್ರೀರಾಮನಗರ ಮತ್ತು ವಡ್ಡರಹಟ್ಟಿಯನ್ನು ಎಜ್ಯುಕೇಷನ್ ಹಬ್‌ನ್ನಾಗಿ ಪರಿವರ್ತಿಸಲಾಗುವುದು.