ಕುಕನೂರು 18ನೇ ವಾರ್ಡ್‌ನ ಕಲ್ಲೇಶ್ವರನಗರದಲ್ಲಿ ಬಡವರ ಸೇವೆಗಾಗಿ ಶರಣು ಕಾರ್ಯಾಲಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಬಿಡುಗಡೆ ಮಾಡಿದರು. ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಪ್ರಮುಖರಾದ ನೀಲನಗೌಡ ಪಾಟೀಲ್, ಫಕೀರಪ್ಪ ತಳವಾರ ಇದ್ದರು.
ಕುಕನೂರು: ಪಟ್ಟಣದ 18ನೇ ವಾರ್ಡ್‌ನ ಕಲ್ಲೇಶ್ವರನಗರದಲ್ಲಿ ಯಲಬುರ್ಗಾ ಕ್ಷೇತ್ರದ ಸಂಕಷ್ಟದಲ್ಲಿರುವ ಬಡವರ ಸೇವೆಗಾಗಿ ಜೂ.3ರಂದು ಶರಣು ಕಾರ್ಯಾಲಯ ಆರಂಭಿಸಲಾಗುವುದು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಕಾರ್ಯಾಲಯದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಇಲ್ಲಿವರೆಗೂ ಬಡವರಿಗೆ, ರೈತರಿಗೆ, ಯುವಕರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಹಿರಿಯ ಸೂಚನೆಯಂತೆ ಸಂಕಷ್ಟದಲ್ಲಿರುವ ಬಡವರಿಗಾಗಿ ಸೇವೆ ಮಾಡಲು ಕಾರ್ಯಾಲಯ ಆರಂಭಿಸಲಾಗುತ್ತಿದೆ ಎಂದರು. ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಪ್ರಮುಖರಾದ ನೀಲನಗೌಡ ಪಾಟೀಲ್, ಫಕೀರಪ್ಪ ತಳವಾರ, ಸುರೇಶ ಬೆಣಕಲ್, ರಾಮು ಕೌದಿ, ಬುಡ್ಡಪ್ಪ ಬಾರಕೇರಿ ಇತರರಿದ್ದರು.