ಗಂಗಾವತಿ ತಾಲೂಕಿನ ಮರಳಿಯಲ್ಲಿ ಶನಿವಾರ ಬಿಜೆಪಿ ವಿವಿಧ ಮೋರ್ಚಾದಿಂದ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾಮಟ್ಟದ ಪ್ರಶಿಕ್ಷಣ ವರ್ಗವನ್ನು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ವಿಭಾಗ ಪ್ರಭಾರ ಅಮರನಾಥ ಪಾಟೀಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಎಂಎಲ್ಸಿ ಎನ್. ಶಂಕ್ರಪ್ಪ ಇತರರಿದ್ದರು. 
ಕೊಪ್ಪಳ

ಬಿಜೆಪಿಯಿಂದ ಜನಪರ ಯೋಜನೆ ಜಾರಿ ಸಾಧ್ಯ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅಭಿಮತ
  • ರಾಯಚೂರು ಜಿಲ್ಲಾಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟನೆ
ಗಂಗಾವತಿ: ಪ್ರತಿಯೊಂದು ಸಮಾಜಕ್ಕೂ ಹತ್ತಿರದಲ್ಲಿರುವ ಬಿಜೆಪಿಯಿಂದ ಜನಪರ ಯೋಜನೆಗಳು ಸಾಧ್ಯವಿದ್ದು, ತರಬೇತಿ ಮೂಲಕ ಪ್ರಶಿಕ್ಷಣಾರ್ಥಿಗಳನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.
ತಾಲೂಕಿನ ಮರಳಿಯಲ್ಲಿ ಬಿಜೆಪಿ ವಿವಿಧ ಮೋರ್ಚಾದಿಂದ ಶನಿವಾರ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿ ಮತ್ತು ಸಂಸ್ಕಾರ ನೆಲೆಗಟ್ಟಿನ ಬಿಜೆಪಿಯಿಂದ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಾಧ್ಯ. ಪಕ್ಷದ ತತ್ವ, ಸಿದ್ಧಾಂತಗಳಡಿ ಪಕ್ಷ ಸಂಘಟಿಸಬೇಕಿದ್ದು, ಆದರ್ಶಗಳನ್ನು ಪ್ರಶಿಕ್ಷಣಾರ್ಥಿಗಳು ಜೀವನದಲ್ಲಿ ಅಳವಡಿಸಬೇಕು. ಬಲಪಡಿಸಬೇಕು. ಶಿಕ್ಷಣ ವರ್ಗದ ಮೂಲಕ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತಿದ್ದು, ಪಕ್ಷ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುತ್ತದೆ ಎಂದರು.
ರಾಜಕೀಯ ಪರಿಸ್ಥಿತಿಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಕ್ಷೇತ್ರದಲ್ಲಿ ಪಕ್ಷ ಬಹಳಷ್ಟು ಉಪಯುಕ್ತವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಯಡಿ ಪಕ್ಷವನ್ನು ಜನರ ಬಳಿಗೆ ಕೊಂಡಯ್ಯುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಪಕ್ಷ ಕಾರ್ಯಕರ್ತರು ಮತ್ತು ಅನುಯಾಯಿಗಳಿಗೆ ಸೈದ್ಧಾಂತಿಕ ನೆಲೆಯಾಗಿದೆ. ಸಮತೋಲನ ಬೆಳವಣಿಗೆ ತೋರಿಸಿಕೊಟ್ಟಂತವರು, ಅಂತ್ಯೋದಯ ಪರಿಕಲ್ಪನೆಯಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದಕ್ಕಿಸಿದ ಹಾಗೂ ರಾಷ್ಟ್ರದ ಏಳಿಗೆಗೆ ಶ್ರಮಿಸಿದ ಪಂ. ದೀನದಯಾಳ್ ಉಪಾಧ್ಯಾಯ, ಪಕ್ಷ ಬೆಳವಣಿಗೆಯಲ್ಲಿ ಬಹುರೂಪದಲ್ಲಿ ನೆರವಾಗಿದ್ದಾರೆ ಎಂದರು.
ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ರಾಜ್ಯ ವಕ್ತಾರ ಭಾಸ್ಕರರಾವ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಮಾನಪ್ಪ ವಜ್ಜಲ, ಮಾಜಿ ಎಂಲ್ಸಿ ಎನ್. ಶಂಕ್ರಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ವಿಭಾಗ ಪ್ರಭಾರ ಅಮರನಾಥ ಪಾಟೀಲ್, ಪ್ರಮುಖರಾದ ವೀರನಗೌಡ ಪಾಟೀಲ್, ಕರಿಯಪ್ಪ, ಬಸವನಗೌಡ, ಗಂಗಾಧರ ನಾಯಕ ಇತರರಿದ್ದರು.