ಗಂಗಾವತಿ ತಾಲೂಕು ಕ್ರೀಡಾಂಗಣದ ಯೋಗ ಮಂದಿರದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಅಂತಾರಾಷ್ಟ್ರೀಯ ಅಗ್ನಿಹೋತ್ರ ದಿನ ನಿಮಿತ್ತ ಸಾಮೂಹಿಕ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ಗುರುವಾರ ನಡೆಯಿತು. ಸಮಿತಿ ರಾಜ್ಯ ಪ್ರಭಾರ ಭವರ್‌ಲಾಲ್ ಆರ್ಯ, ಸಹ ಪ್ರಭಾರ ಡಾ.ಎಸ್.ಬಿ.ಹಂದ್ರಾಳ್, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ನೂಲ್ವಿ, ಪದಾಧಿಕಾರಿಗಳಾದ ಶರಭಣ್ಣ, ಡಾ.ವಿಜಯಲಕ್ಷ್ಮೀ ಹಿರೇಮಠ ಇತರರಿದ್ದರು. ------- 
ಕೊಪ್ಪಳ

ಸ್ವಸ್ಥ ಸಮಾಜಕ್ಕೆ ಯೋಗ ಧ್ಯಾನ ಪೂರಕ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಪ್ರಭಾರ ಭವರ್‌ಲಾಲ್ ಆರ್ಯ ಹೇಳಿಕೆ
  • 108 ಅಗ್ನಿ ಹೋತ್ರ ಅನುಷ್ಠಾನ
ಗಂಗಾವತಿ: ಸ್ವಸ್ಥ ಸಮಾಜ, ಆರೋಗ್ಯ ಮತ್ತು ಪರಿಸರಕ್ಕಾಗಿ ಯೋಗ-ಧ್ಯಾನ ಪೂರಕವಾಗಿವೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರ ಭವರ್‌ಲಾಲ್ ಆರ್ಯ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದ ಯೋಗ ಮಂದಿರದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಪತಂಜಲಿ ಯೋಗ ಸಮಿತಿಯಿಂದ ಗುರುವಾರ ನಡೆದ ಅಂತಾರಾಷ್ಟ್ರೀಯ ಅಗ್ನಿಹೋತ್ರ ದಿನಾಚರಣೆಯಲ್ಲಿ ಮಾತನಾಡಿದರು. ಸನಾತನ ಧರ್ಮದ ಸಂಕೇತದ ಅಗ್ನಿಹೋತ್ರ ಪ್ರಾತ್ಯಕ್ಷಿಕೆಯಿಂದ ಹಲವು ಅನುಕೂಲತೆಗಳಿವೆ ಎಂದರು.
ಬೆಳಗಿನ ಜಾವ ಆಯೋಜಿಸಿದ್ದ ದಿನಾಚರಣೆಯಲ್ಲಿ ಸಮಿತಿಯಿಂದಲೇ 108 ಅಗ್ನಿ ಹೋತ್ರ ಅನುಷ್ಠಾನ ಕೈಗೊಂಡಿದ್ದು, ಯೋಗ ಮತ್ತು ಧ್ಯಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕಿಯರಾದ ಜಯಶ್ರೀ ಹಕ್ಕಂಡಿ, ಮಾಲಾ ಶ್ರೀಧರ್, ಹಲವು ವರ್ಷಗಳಿಂದ ಯೋಗ, ಧ್ಯಾನ ತರಬೇತಿ ಕಾರ್ಯಗಾರದಲ್ಲಿ ತೊಡಗಿಸಿಕೊಂಡ ಸಮಿತಿ ರಾಜ್ಯ ಸಹ ಪ್ರಭಾರ ಡಾ.ಎಸ್.ಬಿ.ಹಂದ್ರಾಳ್, ತರಬೇತುದಾರ ಶರಣಪ್ಪ ಕಾರಟಗಿ ಅವರನ್ನು ಸನ್ಮಾನಿಸಲಾಯಿತು.
ಸಮಿತಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ನೂಲ್ವಿ, ಪದಾಧಿಕಾರಿಗಳಾದ ಶರಭಣ್ಣ, ಡಾ.ವಿಜಯಲಕ್ಷ್ಮೀ ಹಿರೇಮಠ, ನಾಗರಾಜ್ ಜವಳಿ, ಶರಣಪ್ಪ ಹಕ್ಕಂಡಿ ಇತರರಿದ್ದರು.