ಸೋಮಶೇಖರಗೌಡ  
ಕೊಪ್ಪಳ

ಲಿತಾಂಶ ಸುಧಾರಣೆಗೆ ಕಾರ್ಯತಂತ್ರ ಅಳವಡಿಸಿ

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ
  • ಸೂಚನೆ
  • ಮಾಹಿತಿ
ಗಂಗಾವತಿ: ಹಿರೇಜಂತಕಲ್ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ತಾಲೂಕುಮಟ್ಟದ ಬಿಇಒ, ಬಿಆರ್‌ಸಿ, ಇಸಿಒ, ಬಿಆರ್‌ಪಿ ಮತ್ತು ಸಿಆರ್‌ಪಿಗಳ ಪ್ರಗತಿ ಪರಿಶೀಲನೆ ಸಭೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಡಿಡಿಪಿಐ ಸೋಮಶೇಖರಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ವಿದ್ಯಾರ್ಥಿಗಳ ಮುಖದ ೆಟೋ ತೆಗೆದು ಹಾಜರಿ ಹಾಕುವ ನಿರಂತರ ಕಾರ್ಯಕ್ರಮ ಪರಿಶೀಲಿಸಲಾಯಿತು. ಪಠ್ಯಪುಸ್ತಕ, ಸಮವಸಗಳ ಹಂಚಿಕೆ, ದ್ವಿಭಾಷಾ ಮಾಧ್ಯಮದ ಕಲಿಕೆ, ಬೋಧನೆ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲಾಯಿತು.ಇತರೇ ಪೂರಕ ಅಂಶಗಳ ಕುರಿತು ಪರಿಶೀಲಿಸಿ ಸಲಹೆಗಳನ್ನು ನೀಡಲಾಯಿತು.
ನಂತರ ನಗರದ ವಿದ್ಯಾಗಿರಿಯ ಎಂಎನ್‌ಎಂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಚರ್ಚಿಸಲಾಯಿತು.
ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗಳನ್ನು ಗುರುತಿಸಿ ಸೂಕ್ತ ಕಾರ್ಯತಂತ್ರ ಅಳವಡಿಸಿ ಶೇ.100ಲಿತಾಂಶ ಪಡೆಯಲು ಸೂಚಿಸಲಾಯಿತು. ಬಿಇಒ ಎಚ್.ಬಿ.ನಟೇಶ, ಸಮನ್ವಯ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗೊಂಡಬಾಳ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ ಇತರರಿದ್ದರು.