ತರಲಕಟ್ಟಿ ತಾಂಡಾದಲ್ಲಿ ಹಮ್ಮಿಕೊಂಡಿದ್ದ ದಲಿತ ಸಭೆಯಲ್ಲಿ ಪಿಎಸ್‌ಐ ಎಸ್.ಪಿ.ನಾಯಕ ಮಾತನಾಡಿದರು. ಪ್ರಮುಖರಾದ ಸಿದ್ದಪ್ಪ ಚವ್ಹಾಣ, ಯಂಕೋಬ ನಾಯ್ಕ, ಯಂಕಪ್ಪ ರಾಠೋಡ, ವೀರೇಶ ನಾಯಕ, ಶೇಖರಪ್ಪ ಲಮಾಣಿ, ಮೃತ್ಯುಂಜಯ ಚವ್ಹಾಣ, ಕೃಷ್ಣಪ್ಪ ಚವ್ಹಾಣ, ರಮೇಶ ಚವ್ಹಾಣ, ರೋಹಿತ್ ರಾಠೋಡ, ಶಾಂತಮ್ಮ ನಾಯ್ಕ ಇತರರಿದ್ದರು.
ಅಸ್ಪಶ್ಯತೆ ಕಂಡರೆ ದೂರು ನೀಡಿ
ಯಲಬುರ್ಗಾ: ಕಾನೂನು ಬಾಹಿರ ಚಟುವಟಿಕೆ ಕಡಿವಾಣಕ್ಕೆ ಗ್ರಾಮಸ್ಥರು ಸಹಕರಿಸಲಿ ಎಂದು ಪಿಎಸ್‌ಐ ಎಸ್.ಪಿ.ನಾಯಕ ಹೇಳಿದರು.
ತಾಲೂಕಿನ ತರಲಕಟ್ಟಿ ತಾಂಡಾದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಲಿತ ಸಭೆಯಲ್ಲಿ ಮಾತನಾಡಿದರು. ಮಟ್ಕಾ, ಜೂಜಾಟ ಹಾಗೂ ಅಸ್ಪಶ್ಯ ಆಚರಣೆ ಕಂಡು ಬಂದರೆ ಠಾಣೆಗೆ ದೂರು ನೀಡಬೇಕು. ದೂರ ಕೊಟ್ಟವರು ಹೆಸರು ಗೌಪ್ಯವಾಗಿ ಇಡಲಾಗುವುದು.
ಶೋಷಣೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯುವಕರು ಮತ್ತು ಪಾಲಕರು ದುಶ್ಚಟಗಳಿಂದ ದೂರವಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಪ್ರಮುಖರಾದ ಸಿದ್ದಪ್ಪ ಚವ್ಹಾಣ, ಯಂಕೋಬ ನಾಯ್ಕ, ಯಂಕಪ್ಪ ರಾಠೋಡ, ವೀರೇಶ ನಾಯಕ, ಶೇಖರಪ್ಪ ಲಮಾಣಿ, ಮೃತ್ಯುಂಜಯ ಚವ್ಹಾಣ, ಕೃಷ್ಣಪ್ಪ ಚವ್ಹಾಣ, ರಮೇಶ ಚವ್ಹಾಣ, ರೋಹಿತ್ ರಾಠೋಡ, ಶಾಂತಮ್ಮ ನಾಯ್ಕ, ಪ್ರಕಾಶ ರಾಠೋಡ, ಸಿಬ್ಬಂದಿ ಗವಿಸಿದ್ದಯ್ಯ ಹಿರೇಮಠ, ಬಸವರಾಜ ಇತರರಿದ್ದರು.