ಗಂಗಾವತಿ ಹಿರೇಜಂತಕಲ್ ಛಲವಾದಿ ಓಣಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಮಂಗಳವಾರ ಚಾಲನೆ ನೀಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉದ್ಯಮಿ ಎಂ.ಸರ್ವೇಶ ಮಲ್ಲಿಕಾರ್ಜುನ, ನಗರಸಭೆ ಮಾಜಿ ಸದಸ್ಯರಾದ ಎ್.ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ ಇತರರಿದ್ದರು.
ಗಂಗಾವತಿ: ನಗರದ ಹಿರೇಜಂತಕಲ್ ಛಲವಾದಿ ಓಣಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಸಾಮೂಹಿಕ ವಿವಾಹ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಪಣೆ ಸಲ್ಲಿಸಿದ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಅಂಬೇಡ್ಕರ್ ವಿಚಾರಧಾರೆಗಳು ನಿರಂತರವಾಗಬೇಕಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆಗೆ ಅರ್ಥ ದೊರೆಯಲಿದೆ ಎಂದರು.
ಬೀದರ್‌ನ ಬುದ್ಧ ವಿಹಾರದ ಪ್ರಜ್ಞಾಬಂತೇಜೀ ಮಾತನಾಡಿ, ಗಂಡ, ಹೆಂಡತಿ ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಸುಖ ಸಂಸಾರ ಸಾಧ್ಯವಗುತ್ತದೆ ಎಂದರು. ಯಾವುದೇ ಅಡಂಬರ-ಸಂಪ್ರದಾಯವಿಲ್ಲದೇ ಸರಳ ರೀತಿಯಲ್ಲಿ 5 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದರ್ಪಣೆ ಮಾಡಿದವು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉದ್ಯಮಿ ಎಂ.ಸರ್ವೇಶ ಮಲ್ಲಿಕಾರ್ಜುನ, ನಗರಸಭೆ ಮಾಜಿ ಸದಸ್ಯರಾದ ಎ್.ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ದಲಿತಪರ ಸಂಘಟನೆ ಪದಾಧಿಕಾರಿಗಳಾದ ಹುಲುಗಪ್ಪ ಮಾಗಿ, ಹರೀಶ ಕೋರಿ, ವೆಂಕಟೇಶ ಮಾನಳ್ಳಿ, ಹುಲಗಪ್ಪ ಮಾಸ್ತರ್, ಹರೀಶ್ ಕೋರಿ, ತಿಮ್ಮಣ್ಣ ಮುಂಡಾಸ್, ವೀರೇಶ ಅರ್ತಿ, ಭೀಮಣ್ಣ ಕರಿಮೂರ್ತಿ, ಆಂಜನೇಯ, ರವಿಬಾಬು ಆರ್ತಿ, ರವಿ ಸೋಮನಾಳ, ರೇಣಪ್ಪ ಗೋಟೂರು, ಮುನಿಯಪ್ಪ, ಹನುಮಂತ ಇತರರಿದ್ದರು.
ತಾಲೂಕಿನ ಮರಕುಂಬಿಯಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯಿಂದಲೂ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಪದಾಧಿಕಾರಿಗಳು, ಅಂಬೇಡ್ಕರ್ ಚಿಂತನೆಗಳ ಬಗ್ಗೆ ಚರ್ಚಿಸಿದರು. ಪ್ರಮುಖರಾದ ಬಸಯ್ಯಸ್ವಾಮಿ ಹಿರೇಮಠ, ಬಸವರಾಜ ಭೋವಿ, ಶರಣೇಗೌಡ, ಈ.ಶರಣಪ್ಪ, ಬಸವರಾಜ ತಳವಾರ್, ದಳಪತಿ ಹುಲುಗಪ್ಪ, ಆಶೇಸಾಬ್ ಕಂದಗಲ್, ಜಗದೀಶಪ್ಪ ಅಂಗಡಿ, ಬಸವರಾಜ, ದೇವಪ್ಪ ಬಡಿಗೇರ್, ಸಣ್ಣ ಹುಲ್ಲೆಪ್ಪ, ರಮೇಶ ಭೋವಿ, ತಿಪ್ಪಣ್ಣ ಮಾಸ್ತರ್ ಇತರರಿದ್ದರು.
ನಗರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಹಾಗೂ ತಾಲೂಕಿನ ಅನೆಗೊಂದಿಯ ಅಂಬೇಡ್ಕರ್ ವೃತ್ತ, ವಿಠಲಾಪುರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ವಿದ್ಯಾರ್ಥಿಗಳಿಂದ ಕವನ ವಾಚನ, ಚಿಂತನಾ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ, ಮಾಜಿ ಅಧ್ಯಕ್ಷ ತಿಮ್ಮಣ್ಣ ಬಾಳಿಕಾಯಿ, ಪಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಹೊನ್ನಪ್ಪ ನಾಯಕ, ಕಲಾವಿದ ವಿಷ್ಣು ತೀರ್ಥ ಜೋಶಿ, ಮುಖಂಡ ಶಿವರಾಂ, ಗ್ರಾಮದ ಪ್ರಮುಖ ಮುತ್ತಣ್ಣ ನೆಲಜೇರಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ರಾಮಪ್ಪ ನಿಲೋಗಲ್, ಮಾರುತಿ ನೆಲಜೇರಿ ಡಿ.ಕೆ.ಮಂಜುನಾಥ, ಶರಣಪ್ಪ ನೆಲಜೇರಿ, ವಿ.ಹುಲ್ಲೇಸ, ದುರುಗೇಶ, ಮಹೇಂದ್ರ, ಎಬಿವಿಪಿ ಪದಾಧಿಕಾರಿಗಳಾದ ಕಿರಣ್ ವಸದ, ಎಚ್.ಎಸ್.ಎಂ.ಈಶ್ವರ, ಪಥ್ವಿ, ಬೆಟ್ಟಪ್ಪ, ಮಹೇಶ, ವಿನಾಯಕ, ಮಂಜುನಾಥ ಇದ್ದರು.