ಕುದರಿಮೋತಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ವಿಧಾನಸಭೆ ಸ್ಪೀಕರ್ ಜೆ.ಎಸ್.ಪಾಟೀಲ್ ಭೇಟಿ ನೀಡಿದ ವೇಳೆ ಮಠದಿಂದ ಸನ್ಮಾನಿಸಲಾಯಿತು. ಶ್ರೀ ವಿಜಯ ಮಹಾಂತ ಸ್ವಾಮೀಜಿ, ಗ್ರಾಮದ ದಳಪತಿ ಹನಮಗೌಡ ಪೊಲೀಸ್ ಪಾಟೀಲ್, ಜಿಪಂ ಮಾಜಿ ಸದಸ್ಯ ಅಶೋಕ ತೋಟದ ಇತರರಿದ್ದರು.
ಕುಕನೂರು: ಕುದರಿಮೋತಿ ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ವಿಧಾನಸಭೆ ಸ್ಪೀಕರ್ ಜೆ.ಎಸ್.ಪಾಟೀಲ್ ಶನಿವಾರ ಭೇಟಿ ನೀಡಿ ಶ್ರೀ ವಿಜಯ ಮಹಾಂತ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ನಂತರ ಮಾತನಾಡಿ, ಕುದರಿಮೋತಿಯ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡುತ್ತಿರುವುದು ನನಗೆ ಅತ್ಯಂತ ಸಂತೋಷ ಹಾಗೂ ಪುಣ್ಯದ ಕ್ಷಣವಾಗಿದೆ. ಶ್ರೀಮಠದ ಮೇಲೆ ನನಗೆ ಅಪಾರ ಗೌರವ ಮತ್ತು ಭಕ್ತಿ ಇದೆ.
ವಿಧಾನಸಭೆ ಸ್ಪೀಕರ್ ಆಗಿ ದೊರೆತಿರುವ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಎಲ್ಲ ಸದಸ್ಯರಿಗೂ ಸಮಾನ ಅವಕಾಶ ಕಲ್ಪಿಸಿ, ಸದನದ ಗೌರವ ಮತ್ತು ಘನತೆಯನ್ನು ಕಾಪಾಡುವುದು ನನ್ನ ಪ್ರಮುಖ ಕರ್ತವ್ಯವಾಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಪ್ರಮುಖರಾದ ಬಸಪ್ಪ ದೊಡ್ಡಮನಿ, ಮುದಕಪ್ಪ ರ‌್ಯಾವಣಿಕಿ, ಮಂಜುನಾಥ ಗಟ್ಟೆಪ್ಪನವರ, ಅಮರೇಶ ತಲ್ಲೂರು, ಸುಭಾಷ್ ಈಡಿಗೇರ, ಫರೀದಾಬೇಗಂ, ಬಸವರಾಜ ಗಟ್ಟೆಪ್ಪನವರ, ಮಹಾಂತಪ್ಪ ಸಿಡ್ನಾಳಿ ಇತರರಿದ್ದರು.