ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ನಿರತರಾಗಿರುವ ಭಕ್ತರು, ಸ್ವಯಂಸೇವಕರು ಹಾಗೂ ಪೊಲೀಸ್ ಸಿಬ್ಬಂದಿ. 
ಕೊಪ್ಪಳ

ಹುಲಿಗೆಮ್ಮ ದೇವಿ ಹುಂಡಿ ಹಣ ಎಣಿಕೆ

ನರೇಶ್ ಕುಮಾರ್
ಹುಲಿಗೆಮ್ಮ ದೇವಿ ಹುಂಡಿ ಹಣ ಎಣಿಕೆ Huligemma Devi Hundi money counting
* 86.71 ಲಕ್ಷ ನಗದು, 140 ಗ್ರಾಂ ಚಿನ್ನ ಕಾಣಿಕೆ
ಮುನಿರಾಬಾದ್: ಹುಲಿಗಿಯ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
ಕಳೆದ 47 ದಿನಗಳ ಅವಧಿಯಲ್ಲಿ ಒಟ್ಟು 8 ಹುಂಡಿಗಳಿಂದ 86,71,795 ನಗದು, 140 ಗ್ರಾಂ ಕಚ್ಚಾ ಬಂಗಾರ ಹಾಗೂ 3.9 ಕೆ.ಜಿ. ಕಚ್ಚಾ ಬೆಳ್ಳಿ ಸಂಗ್ರಹವಾಗಿದೆ.
ಎಣಿಕೆ ಕಾರ್ಯದಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ, ನೂರಾರು ಭಕ್ತರು, ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ ಇ., ದೇವಸ್ಥಾನ ಕಾರ್ಯದರ್ಶಿ ಎಂ.ಎಚ್.ಪ್ರಕಾಶ ರಾವ್, ಮುನಿರಾಬಾದ್ ಠಾಣೆಯ ಎಎಸ್‌ಐ ಇನಾಯತ್ ಇತರರಿದ್ದರು.