ಶಾಸಕ ರಾವೇಂದ್ರ ಹಿಟ್ನಾಳ  
ಕೊಪ್ಪಳ

ಸಚಿವ ಸ್ಥಾನ ಸಿಗುವ ಭರವಸೆ ಇದೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾವೇಂದ್ರ ಹಿಟ್ನಾಳ
ಕೊಪ್ಪಳ : ನನಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್​ ಹೈಕಮಾಂಡ್​ಗೆ ಮನವರಿಕೆ ಮಾಡಿದ್ದು ಸಿಗುವ ವಿಶ್ವಾಸವಿದೆ ಎಂದು ಶಾಸಕ ರಾವೇಂದ್ರ ಹಿಟ್ನಾಳ ಭರವಸೆ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವ ಸ್ಥಾನ ಕೇಳುವುದು ಅನಿವಾರ್ಯ. ನಾವಾಗಿಯೇ ಕೇಳಿದಾಗ ಅಧಿಕಾರ ಸಿಗಲಿದೆ. ಸಮುದಾಯ ಮುಖಂಡರು ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಹೈಕಮಾಂಡ್​ ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ನಮ್ಮ ಪ್ರಯತ್ನ ಮುಂದುವರೆದಿದೆ. ಅಂತಿಮ ನಿರ್ಧಾರ ನಾಯಕರಿಗೆ ಬಿಟ್ಟಿದ್ದು ಎಂದರು.
ಕೊಪ್ಪಳ ಕ್ಷೇತ್ರದವರು ಈವರೆಗೂ ಮಂತ್ರಿ ಆಗಿಲ್ಲ. ಹಿಂದೆ ವೀರುಪಾಕ್ಷಪ್ಪ ಅವರು ಆಗಿದ್ದರು. ಅದು ಬಿಟ್ಟರೆ ಉಳಿದವರು ಆಗಿಲ್ಲ. ರಾಜ್ಯ, ಕೇಂದ್ರದಲ್ಲೂ ಆದ ಉದಾಹರಣೆ ಇಲ್ಲ. ಇದೆಲ್ಲವನ್ನು ಹೈಕಮಾಂಡ್​ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.