ಕನಕಗಿರಿ ತಾಲೂಕಿನ ಕೆ.ಕಾಟಾಪೂರ ಶಾಲಾ ವಾರ್ಷಿಕೋತ್ಸವದಲ್ಲಿ ಸೂಲಗಿತ್ತಿಯರಾಗಿದ್ದ ಗ್ರಾಮದ 70 ವರ್ಷ ಮೇಲ್ಪಟ್ಟ ಮಹಿಳಾ ಸಾಧಕಿಯರಿಗೆ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ವೆಂಕೋಬ ಪೂಜಾರ, ಎಸ್ಡಿಎಂಸಿ ಅಧ್ಯಕ್ಷ ದುರುಗಪ್ಪ ಪಚ್ಚಿ, ಉಪಾಧ್ಯಕ್ಷ ರಾಮಣ್ಣ ಭೋವಿ, ಸದಸ್ಯರಾದ ಹನುಮಂತ ಹರಿಜನ, ಶ್ರೀನಿವಾಸ ಗೊಲ್ಲರ್ ಇತರರಿದ್ದರು.
ಮಹಿಳಾ ಸಾಧಕಿಯರಿಗೆ ಸನ್ಮಾನ
ಕನಕಗಿರಿ: ತಾಲೂಕಿನ ಕೆ.ಕಾಟಾಪೂರ ಗ್ರಾಮದ ಸಕಿಪ್ರಾ ಶಾಲೆಯ ವಾರ್ಷಿಕೋತ್ಸವದಲ್ಲಿ 70 ವರ್ಷ ಮೇಲ್ಪಟ್ಟ 35 ಜನ ಮಹಿಳಾ ಸಾಧಕಿಯರನ್ನು ಇತ್ತೀಚಿಗೆ ಶಾಲಾಭಿವೃದ್ಧಿ ಸಮಿತಿಯಿಂದ ಸನ್ಮಾನಿಸಲಾಯಿತು.
ಸೂಲಗಿತ್ತಿಯರಾಗಿದ್ದ ಗ್ರಾಮದ 70 ವರ್ಷ ಮೇಲ್ಪಟ್ಟ ದುರುಗಮ್ಮ ಭೋವಿ, ಗುಂಡಮ್ಮ ಚಿಗರಿ, ಬಾಲಮ್ಮ ಪಚ್ಚಿ, ಅಂಬಮ್ಮ ಗೌಡ್ರ ಅನೇಕ ವರ್ಷ ಸೇವೆ ಸಲ್ಲಿಸಿದ್ದಾರೆ. ಗ್ರಾಪಂ ಸದಸ್ಯರಾದ ಅಕ್ಕನಾಗಮ್ಮ ಶಿವಲಿಂಗನಗೌಡ್ರು ಸೇರಿದಂತೆ 30ಕ್ಕೂ ಹೆಚ್ಚು ಹಿರಿಯ ಮಹಿಳಾ ಸಾಧಕಿಯರ ಗಣನೀಯ ಸೇವೆಗೆ ಸನ್ಮಾನಿಸಲಾಯಿತು.
ನಂತರ ಶಾಲಾ ಮಕ್ಕಳಿಂದ ಅನಕ್ಷರತೆ, ಭ್ರಷ್ಟಚಾರ, ಬಾಲ್ಯ ವಿವಾಹ ಹಾಗೂ ವರದಕ್ಷಣೆ ಕುರಿತಾಗಿ ಕಿರು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮುಖ್ಯಶಿಕ್ಷಕ ವೆಂಕೋಬ ಪೂಜಾರ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ದುರುಗಪ್ಪ ಪಚ್ಚಿ, ಉಪಾಧ್ಯಕ್ಷ ರಾಮಣ್ಣ ಭೋವಿ, ಸದಸ್ಯರಾದ ಹನುಮಂತ ಹರಿಜನ, ಶ್ರೀನಿವಾಸ ಗೊಲ್ಲರ್, ವಿಠ್ಠಲ ಚಿಗರಿ, ವೀರೇಶ ಪೂಜಾರ, ಶಿವರಾಜ ಪಚ್ಚಿ, ಶಿಕ್ಷಕರಾದ ವೀರನಗೌಡ, ಈರಮ್ಮ ಪಚ್ಚಿ, ಪ್ರಮುಖರಾದ ಶಿವಲಿಂಗಗೌಡ ದಳಪತಿ, ವೆಂಕನಗೌಡ ಪಾಟೀಲ್, ಲಕ್ಷ್ಮಣಗೌಡ, ಪಂಪಾಪತಿ ಪಚ್ಚಿ ಇತರರಿದ್ದರು.