ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿಯ ಅರಣ್ಯ ಇಲಾಖೆ ವ್ಯಾಪ್ತಿಯ ರೆಸಾರ್ಟ್‌ಗಳನ್ನು ಗುರುವಾರ ತೆರವುಗೊಳಿಸಲಾಯಿತು.
ಗಂಗಾವತಿ: ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ತಾಲೂಕಿನ ವಿರುಪಾಪುರ ಗಡ್ಡಿಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದ ರೆಸಾರ್ಟ್‌ಗಳನ್ನು ಗುರುವಾರ ತೆರವುಗೊಳಿಸಲಾಯಿತು.
ಪರವಾನಗಿ ಪಡೆಯದೇ ನಡೆಯುತ್ತಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಮೇಲೆ ಜಿಲ್ಲಾಡಳಿತ ನಿಗಾವಹಿಸಿದ್ದು, ದಾಖಲೆ ಪರಿಶೀಲಿಸುವ ಅಧಿಕಾರ ತಾಲೂಕಾಡಳಿತಕ್ಕೆ ನೀಡಿದೆ. ಕಂದಾಯ, ಜೆಸ್ಕಾಂ, ಅರಣ್ಯ, ತಾಪಂ, ಗ್ರಾಪಂ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ಕಳೆದೆರೆಡು ದಿನಗಳಿಂದ ಪರಿಶೀಲನಡೆ ನಡೆಸುತ್ತಿದ್ದು, 89 ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಪೈಕಿ 45ಕ್ಕೂ ಹೆಚ್ಚು ಪರಿಶೀಲಿಸಲಾಗಿತ್ತು.
ಅರಣ್ಯ ಪ್ರದೇಶದಲ್ಲಿದ್ದ 3 ರೆಸಾರ್ಟ್‌ಗಳನ್ನು ತೆರವುಗೊಳಿಸಿದ್ದ ಅರಣ್ಯ ಸಿಬ್ಬಂದಿ, ತಾಲೂಕಿನ ವಿರುಪಾಪುರ ಗಡ್ಡಿಯ ನದಿ ತೀರ ತೀರದಲ್ಲಿ ಎರಡು ರೆಸಾರ್ಟ್‌ಗಳನ್ನು ಎರಡನೇ ದಿನ ತೆರವುಗೊಳಿಸಲಾಯಿತು. ನೀರು ನಾಯಿ ಸಂರಕ್ಷಿತ ಪ್ರದೇಶ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ರೆಸಾರ್ಟ್ ನಿರ್ಮಿಸಿಕೊಂಡಿದ್ದು, ಈ ಬಗ್ಗೆ ದೂರುಗಳು ಬಂದಿದ್ದವು. ಇತ್ತೀಚಿಗೆ ರೆಸಾರ್ಟ್ ಮಾಲೀಕರು ತುಂಗಭದ್ರಾ ನದಿ ತೀರದಲ್ಲಿ ರೇವು ಪಾರ್ಟಿ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳ ಮೇಲೆ ನಿಗಾವಹಿಸಲಾಗಿದೆ.
ಅರಣ್ಯ ಇಲಾಖೆ ುಲ್ ಅಲರ್ಟ್ ಆಗಿದ್ದು, ಅರಣ್ಯ ಪ್ರದೇಶದಲ್ಲಿರುವ ಎಲ್ಲ ರೆಸಾರ್ಟ್‌ಗಳ ತೆರವಿಗೆ ನಿರ್ಧರಿಸಿದೆ. ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪೂಜಾರಿ, ಸಹಾಯಕರಾದ ಗುಂಡಪ್ಪ, ಚಂದ್ರಶೇಖರ್ ಸೇರಿ ಅರಣ್ಯ ಸಿಬ್ಬಂದಿಯಿದ್ದರು.