ಗಂಗಾವತಿ ಶಾರದಾನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಹಿಂದು ಸಮ್ಮೇಳನ ಸಮಿತಿ ಸಂಚಾಲಕರಾದ ಕಂಚಿಕಾರಾಣಿ ರಾಯ್ಕರ್ ಮತ್ತು ಶಕುಂತಲಾ ವೈ ಕಲ್ಲೂರ್ ಅವರನ್ನು ಸನ್ಮಾನಿಸಲಾಯಿತು. ಶಾರದಾ ಮಹಿಳಾ ಭಜನಾ ಮಂಡಳಿಯ ಶ್ರೀದೇವಿ ಪುರಾಣಿಕ, ವಿದ್ಯಾವತಿ ಇದ್ದರು.
- ವಿಶೇಷ ಪೂಜೆ
- ಲಲಿತ ಸಹಸ್ರನಾಮ ಪಾರಾಯಣ
ಒಗ್ಗೂಡಿಸುವ ವಿಶಿಷ್ಟ ಶಕ್ತಿ ಹಿಂದೂ ಧರ್ಮ
ಗಂಗಾವತಿ: ನಗರದ ಶಾರದಾನಗರದ ಶ್ರೀ ಶಾರದಾಂಬೆ ದೇವಾಲಯದ 8ನೇ ವಾರ್ಷಿಕೋತ್ಸವ ನಿಮಿತ್ತ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಂಕರ ಮಠದಿಂದ ದೇವಾಲಯದಲ್ಲಿನ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಲಲಿತ ಸಹಸ್ರನಾಮ ಪಾರಾಯಣ, ವಿವಿಧ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಏಕತೆ ಬೆಳೆಸುವಲ್ಲಿ ಹಾಗೂ ವಿಶ್ವ ಬಂಧುತ್ವ ಸಾರುವ ಭಾರತದ ಸನಾತನ ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸುವ ವಿಶಿಷ್ಟ ಶಕ್ತಿಯಾಗಿದೆ ಎಂದರು.
ಹಿಂದೂ ಸಮ್ಮೇಳನ ಸಮಿತಿ ಸಂಚಾಲಕರಾದ ಕಂಚಿಕಾರಾಣಿ ರಾಯ್ಕರ್ ಮತ್ತು ಶಕುಂತಲಾ ವೈ.ಕಲ್ಲೂರ್ ಅವರನ್ನು ಸನ್ಮಾನಿಸಲಾಯಿತು. ಅರ್ಚಕರಾದ ಕುಮಾರ್‌ಭಟ್, ಭೀಮಭಟ್, ಶಾರದಾ ಮಹಿಳಾ ಭಜನಾ ಮಂಡಳಿಯ ಶ್ರೀದೇವಿ ಪುರಾಣಿಕ, ವಿದ್ಯಾವತಿ ಇತರರಿದ್ದರು.