ಹನುಮಸಾಗರದ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ಛದ್ಮವೇಷ ಧರಿಸಿ ಗಮನ ಸೆಳೆದರು. ಸಿಆರ್‌ಪಿ ಲೆಂಕಪ್ಪ ವಾಲಿಕಾರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ಯಲ್ಲನಗೌಡ ಪಾಟೀಲ್, ನಿರ್ದೇಶಕರಾದ ಗೌರಮ್ಮ ತಳವಾರ, ಉಮಾ ನಾಗೂರ ಇತರರಿದ್ದರು. 
ಕೊಪ್ಪಳ

ನಿರಂತರ ಅಭ್ಯಾಸದಿಂದ ಉನ್ನತ ಹುದ್ದೆ

ಶಾಮಸುಂದರ್ ಕೊಪ್ಪಳಕರ್
ಹನುಮಸಾಗರ: ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುವುದನ್ನು ತಪ್ಪಿಸಿ ಪುಸ್ತಕ ಓದಲು ತಿಳಿಸಬೇಕು ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಪಟ್ಟಣದ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಎಫ್‌ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಅಭ್ಯಾಸದ ಜತೆ ಪಠ್ಯೇತ ಚಟುವಟಿಕೆಗಳನ್ನು ಆಯೋಜಿಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯ. ಉತ್ತಮ ಶ್ರೇಣಿಯಲ್ಲಿ ಪಾಸ್ ಆಗಬೇಕು. ದುಡಿಯದೇ ಹಣ ಬರಬೇಕು ಎಂಬ ಮನಸ್ಥಿತಿ ಇದೆ. ಮಕ್ಕಳು ನಿರಂತರ ಅಭ್ಯಾಸ ಮಾಡಿದರೆ ಉನ್ನತ ಹುದ್ದೆ ದೊರೆಯಲಿದೆ ಎಂದರು. ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಬಲಪಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಉಪಾಧ್ಯಕ್ಷ ಯಲ್ಲನಗೌಡ ಪಾಟೀಲ್, ನಿರ್ದೇಶಕರಾದ ಗೌರಮ್ಮ ತಳವಾರ, ಉಮಾ ನಾಗೂರ, ಮುಖ್ಯಶಿಕ್ಷಕರಾದ ಮಲ್ಲಪ್ಪ ಕುಂಬಾರ, ಗಂಗಾಧರಪ್ಪ, ಬಸಪ್ಪ ಬಂಡಿವಡ್ಡರ, ಭಾರತಿ ದೇಸಾಯಿ, ಮೈಬೂಬ ಬಾಗವಾನ, ಚಂದಪ್ಪ ಹಕ್ಕಿ, ಸದಾಶಿವಯ್ಯ ಹಿರೇಮಠ, ಬಸವರಾಜ ವಡ್ಡರ, ಮೈಬೂಬ ಮೇಣೆದಾಳ, ರಾಜಕುಮಾರ ನಾಯಕ, ಮೈಬೂಬಸಾಬ್ ಕಂದಗಲ್, ಅಶೋಕ ಕಟ್ಟಿಮನಿ ಇತರರಿದ್ದರು.