ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಪ್ರಾಚಾರ್ಯ ಶಿವಸಂಗಯ್ಯ ಹಿರೇಮಠ, ಶಿಕ್ಷಕರಾದ ಜೀಲಾನಿ ಸಾಬ್ ದೇಸಾಯಿ, ಶಿಕ್ಷಕಿರಾದ ಕೆ.ರಾಧಾ, ಪ್ರೀತಿ, ದೇವಮ್ಮ ಹಂದ್ರಾಳ ಇತರರಿದ್ದರು.
- ಪ್ರಾಚಾರ್ಯ ಶಿವಸಂಗಯ್ಯ ಹಿರೇಮಠ ಹೇಳಿಕೆ
- ಅಂತಾರಾಷ್ಟ್ರೀಯ ಯೋಗ ದಿನ
ಮುನಿರಾಬಾದ್: ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ದೈಹಿಕ ಆರೋಗ್ಯದ ಜತೆ ಮಾನಸಿಕ ಶಾಂತಿ ದೊರೆಯುತ್ತದೆ ಎಂದು ಪ್ರಾಚಾರ್ಯ ಶಿವಸಂಗಯ್ಯ ಹಿರೇಮಠ ಹೇಳಿದರು. ಸಮೀಪದ ಹಿಟ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒತ್ತಡದ ಜೀವನಶೈಲಿಯಲ್ಲಿ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಯೋಗ ಸಹಕಾರಿಯಾಗಿದೆ. ಪ್ರತಿದಿನ 20 ನಿಮಿಷ ಯೋಗಾಭ್ಯಾಸಕ್ಕೆ ಮೀಸಲಿಡಬೇಕು ಎಂದರು. ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಶಿಕ್ಷಕರಾದ ಜೀಲಾನಿ ಸಾಬ್ ದೇಸಾಯಿ, ಶಿಕ್ಷಕಿರಾದ ಕೆ.ರಾಧಾ, ಪ್ರೀತಿ, ದೇವಮ್ಮ ಹಂದ್ರಾಳ ಇತರರಿದ್ದರು.