ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ತಂತ್ರ ದೀಪ್ತಿ 2026 ರಾಷ್ಟ್ರೀಯ ಸಮ್ಮೇಳನವನ್ನು ಜಿಲ್ಲಾ ವೈದ್ಯಾಧಿಕಾರಿ ಈಶ್ವರ ಸವಡಿ ಉದ್ಘಾಟಿಸಿದರು. ಕಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ವಿಜಯನಾಥ ಇಟಗಿ, ಸ್ಫೂರ್ತಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ನಿರ್ದೇಶಕರಾದ ಡಾ.ಸತೀಶ ರಾಯ್ಕರ್, ಡಾ.ಉಮೇಶ ವಿ.ಪುರದ್ ಇತರರಿದ್ದರು.
- ಜಿಲ್ಲಾ ವೈದ್ಯಾಧಿಕಾರಿ ಈಶ್ವರ ಸವಡಿ ಅನಿಸಿಕೆ
- ತಂತ್ರ ದೀಪ್ತಿ ರಾಷ್ಟ್ರೀಯ ಕಾರ್ಯಕ್ರಮ
ಗಂಗಾವತಿ: ಆಯುರ್ವೇದದ ವೈಜ್ಞಾನಿಕ ಬೆಳವಣಿಗೆ ಮತ್ತು ಸಂಶೋಧನೆಗೆ ಸಮ್ಮೇಳನ ಪೂರಕವಾಗಿದ್ದು, ಶೈಕ್ಷಣಿಕ ಶ್ರೇಷ್ಠತೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಈಶ್ವರ ಸವಡಿ ಹೇಳಿದರು.
ಅಮರ ಗಾರ್ಡ್‌ನಲ್ಲಿ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಡಾ.ಎಸ್.ವಿ.ಸವಡಿ ಆಯುರ್ವೇದಿಕ್ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಂತ್ರ ದೀಪ್ತಿ 2026 ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಆಯುರ್ವೇದದ ತಂತ್ರ ಶರೀರದ ಜ್ಞಾನವನ್ನು ಆಧುನಿಕ ನರ ವಿಜ್ಞಾನದೊಂದಿಗೆ ಸಮನ್ವಯಗೊಳಿಸುವ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ವೈದ್ಯಕೀಯ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು. ಕಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ವಿಜಯನಾಥ ಇಟಗಿ ಮಾತನಾಡಿ, ಆಯುರ್ವೇದ ಶಿಕ್ಷಣ ಮತ್ತು ಸಂಶೋಧನೆ ಅಭಿವೃದ್ಧಿಗೆ ರಾಷ್ಟ್ರೀಯ ಸಮ್ಮೇಳನ ಸಹಕಾರಿಯಾಗಿದ್ದು, ಪರಿಣಾಮಕಾರಿ ಚಿಕಿತ್ಸೆಗೆ ನೆರವಾಗಲಿದೆ ಎಂದರು. ಆಯುರ್ವೇದ ತಜ್ಞರು, ಅಧ್ಯಾಪಕರು, ಸಂಶೋಧಕರು ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿಸಿದರು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಸ್ಫೂರ್ತಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ಸವಡಿ, ಸ್ಫೂರ್ತಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ನಿರ್ದೇಶಕರಾದ ಡಾ.ಸತೀಶ ರಾಯ್ಕರ್, ಡಾ.ಉಮೇಶ ವಿ.ಪುರದ್, ಸವಿತಾ ಸವಡಿ, ತಜ್ಞರಾದ ಡಾ.ಜಗದೀಶ ಕೋನರೆಡ್ಡಿ, ಡಾ.ಸಂಕನಗೌಡ ಪಾಟೀಲ್, ಡಾ.ಕಿರಣಕುಮಾರ, ಡಾ.ಡಿ.ವಿ.ಲೀಲಾಧರ್, ಡಾ.ಸಿದ್ದನಗೌಡ ಎ.ಪಾಟೀಲ್ ಇತರರಿದ್ದರು.