ಗ್ರಾಪಂನಲ್ಲಿ ಆರಂಭವಾಗಿರುವ ಸೌಲಭ್ಯ ಕೇಂದ್ರ. 
ಕೊಪ್ಪಳ

ಗ್ರಾಪಂಗಳಲ್ಲಿ ಸಹಾಯ-ಸೌಲಭ್ಯ ಕೇಂದ್ರ ಆರಂಭ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ದುಂಡಪ್ಪ ತುರಾದಿ
ಕೊಪ್ಪಳ: ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಸಹಾಯ ಮತ್ತು ಸೌಲಭ್ಯ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಾಪಂ ಇಒ ದುಂಡಪ್ಪ ತುರಾದಿ ತಿಳಿಸಿದ್ದಾರೆ.
ಗ್ರಾಮೀಣರಿಗೆ ವಿವಿಧ ಸರ್ಕಾರಿ ಸೇವೆಗಳು, ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ ಸೇರಿ ಇತರ ಸೌಲಭ್ಯ ಕಲ್ಪಿಸಲಾಗುವುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು ಸುಲಭವಾಗಿ ದೊರೆಯುವಂತೆ ಮಾಡಲು ಕೇಂದ್ರ ಆರಂಭಿಸಲಾಗಿದೆ. ಜನರು ಕುಂದುಕೊರತೆ, ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ 8277506000 ಸಂಖ್ಯೆ ಸಂಪರ್ಕಿಸಬಹುದು. ಸಹಾಯ ಮತ್ತು ಸೌಲಭ್ಯ ಕೇಂದ್ರಗಳ ಸ್ಥಾಪನೆಯಿಂದಾಗಿ ಗ್ರಾಮೀಣ ಜನರು ವಿವಿಧ ಪ್ರಮಾಣ ಪತ್ರಗಳು ಹಾಗೂ ಇತರ ಸೇವೆಗಳಿಗೆ ದೂರದ ತಾಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಲಿದೆ. ಪಂಚಾಯಿತಿ ಮಟ್ಟದಲ್ಲೇ ತ್ವರಿತ ಸೇವೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.