ಕೊಪ್ಪಳದಲ್ಲಿ ಶನಿವಾರ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಹೂ ನೀಡಿ ಜಾಗೃತಿ ಮೂಡಿಸಿದ ಟ್ರಾಫಿಕ್ ಪಿಎಸ್ಐ ವೆಂಕಟೇಶ ಹಾಗೂ ಸಿಬ್ಬಂದಿ.
- ಹೂ ನೀಡಿ ಜಾಗೃತಿ ಮೂಡಿಸಿದ ಪೊಲೀಸರು
ಕೊಪ್ಪಳ : ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಸಂಚಾರಠಾಣೆ ಸಿಬ್ಬಂದಿ ಬೈಕ್ ಸವಾರರಿಗೆ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದರು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿಲ್ಲ. ಸಣ್ಣ&ಪುಟ್ಟ ಅಪಘಾತವಾದಲ್ಲಿ ತಲೆಗೆ ಪೆಟ್ಟು ಬಿದ್ದು ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ರಾಕವಚ ಧರಿಸಬೇಕು. ರ್ನಿಲಕ್ಷ$್ಯ ಮಾಡಬಾರದು ಎಂದು ಮನವಿ ಮಾಡಿದರು. ಗವಿಮಠ, ಅಶೋಕ ವೃತ್ತ, ಜವಾಹರ ರಸ್ತೆ, ಬಸ್ ನಿಲ್ದಾಣ ಮುಂಭಾಗ, ಲಾಲ ಬಹಾದ್ದೂರ ಶಾಸ್ತ್ರಿ ವೃತ್ತ, ಬಸವೇಶ್ವರ ವೃತ್ತ ಸೇರಿ ಪ್ರಮುಖ ಕಡೆಗಳಲ್ಲಿ ಅರಿವು ಮೂಡಿಸಲಾಯಿತು.
ಆಗಸ್ಟ್ 1ರಿಂದ ಕೊಪ್ಪಳದಲ್ಲೂ ಹೆಲ್ಮೆಟ್ ಧರಿಸುವಿಕೆ ಕಡ್ಡಾಯಗೊಳ್ಳಲಿದೆ. ಪ್ರಮುಖ ಕಡೆಗಳಲ್ಲಿ ಜಾಗೃತಿ ಲಕ, ಬ್ಯಾನರ್ ಅಳವಡಿಸಲಾಗುತ್ತಿದೆ. ಪಿಎಸ್ಐ ವೆಂಕಟೇಶ, ಶಬಾನ ಬಾನು ಸೇರಿ ಸಂಚಾರ ಠಾಣೆ ಸಿಬ್ಬಂದಿ ನಗರಾದ್ಯಂತ ಜಾಗೃತಿ ಕೈಗೊಂಡರು. ಜುಲೈ ಅಂತ್ಯದವರೆಗೂ ಅರಿವು ಕಾರ್ಯಕ್ರಮ ನಡೆಯಲಿದ್ದು ಆ.1ರಿಂದ ಧರಿಸದವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಮೂಲಕ ಎಚ್ಚರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.