ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೆಂಕಟರಾವ್ ಕುಲಕರ್ಣಿ ಉದ್ಘಾಟಿಸಿದರು. ರಾಜವಂಶಸ್ಥರಾದ ರಾಜಾ ವಿಜಯ ನಾಯಕ, ರಾಜಾ ಸುಭಾಷಚಂದ್ರ ನಾಯಕ ಇತರರಿದ್ದರು. 
ಕೊಪ್ಪಳ

ನೈಸರ್ಗಿಕ ಮೂಲಿಕೆ ಅನಾರೋಗ್ಯಕ್ಕೆ ರಾಮಬಾಣ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಆಯುಷ್ ಅಧಿಕಾರಿ ಪರ್ವತಗೌಡ ಹಿರೇಗೌಡ್ರ ಹೇಳಿಕೆ
ಕನಕಗಿರಿ: ಆಯುರ್ವೇದ ಚಿಕಿತ್ಸೆಯಿಂದ ದೇಹದ ಶುದ್ಧೀಕರಣ, ರೋಗ ನಿರೋಧಕ ಶಕ್ತಿ ವೃದ್ಧಿ ಜತೆಗೆ ದೀರ್ಘಕಾಲದ ಕಾಯಿಲೆಗಳಿಗೆ ಪರಿಹಾರ ಒದಗಿಸಲು ನೆರವಾಗುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪರ್ವತಗೌಡ ಹಿರೇಗೌಡ್ರ ಹೇಳಿದರು.
ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರ ಹಿರೇ ದೇವತೆಯ 24ನೇ ವರ್ಷದ ಜಾತ್ರೆ ನಿಮಿತ್ತ ರಾಜವಂಶಸ್ಥರಾದ ದಿ.ರಾಜಾ ರಂಗಪ್ಪ ನಾಯಕ, ರಾಜಾ ಉಡಚಪ್ಪ ನಾಯಕ ಹಾಗೂ ರಾಜಾ ಉಡಚೇಂದ್ರ ನಾಯಕ ಸ್ಮರಣಾರ್ಥ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನೈಸರ್ಗಿಕ ಮೂಲಿಕೆಗಳು ಮತ್ತು ಔಷಧ ಬಳಸುವುದರಿಂದ, ಸರಿಯಾದ ವೈದ್ಯರ ಸಲಹೆಯೊಂದಿಗೆ ತೆಗೆದುಕೊಂಡರೆ ಅಡ್ಡಪರಿಣಾಮಗಳು ಕಡಿಮೆ ಎಂದರು.
100ಕ್ಕೂ ಹೆಚ್ಚಿನ ರೋಗಿಗಳು ಶಿಬಿರದಲ್ಲಿ ಚಿಕಿತ್ಸೆ ಪಡೆದುಕೊಂಡರು. ಅಂಬಿಕಾ ಬ್ಲಡ್ ಬ್ಯಾಂಕ್‌ನಿಂದ ಶಿಬಿರ ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ತಪಾಸಣೆ ನಡೆಯಿತು.
ರಾಜವಂಶಸ್ಥರಾದ ರಾಜಾ ವಿಜಯ ನಾಯಕ, ರಾಜಾ ಸುಭಾಷಚಂದ್ರ ನಾಯಕ, ರಾಜಾ ಶರತ್ ಚಂದ್ರ ನಾಯಕ, ರಾಜಾ ಚನ್ನಪ್ಪ ನಾಯಕ, ರಾಜಾ ಆನಂದ ನಾಯಕ, ದೇವರಾಜ ನಾಯಕ ಜಹಗೀರದಾರ, ರಾಜಾ ಅಮರೇಶ ನಾಯಕ, ಕೇಶಪ್ಪ ನಾಯಕ, ಅರ್ಚಕ ಗದ್ದೆಪ್ಪ ಸುಬೇದಾರ, ಪ್ರಮುಖರಾದ ಶಾಮಣ್ಣ ಸುಂಡಿ, ಕನಕರಾಯ ಸುಂಡಿ, ಮುರ್ತುಜಾಸಾಬ್, ಜಿಲಾನಿಸಾಬ, ಯಂಕಣ್ಣ ಕುಲಕರ್ಣಿ, ಜಗದೀಶಪ್ಪ ಗದ್ದಿ, ಶೇಖರಗೌಡ ಪೊ.ಪಾಟೀಲ್ ಇತರರಿದ್ದರು.