ತಾವರಗೇರಾದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಜಿಲ್ಲಾ ಆಯುಷ್ ಇಲಾಖೆಯ ಆಡಳಿತ ಆರೋಗ್ಯಾಧಿಕಾರಿ ಡಾ.ಪರ್ವತ ಗೌಡ ಹಿರೇಗೌಡರ್, ವೈದ್ಯಾಧಿಕಾರಿ ಯಮನಪ್ಪ ಸಿರವಾರ, ಡಾ.ಭಾರುತಿ ದೊಡ್ಡಮನಿ, ಡಾ.ದೀಪಾ ಕಾಕತಿಕರ್, ಡಾ.ವಿಜಯಲಕ್ಷ್ಮೀ, ಪಪಂ ಸದಸ್ಯ ಕರಡೆಪ್ಪ ನಾಲತವಾಡ, ಪ್ರಮುಖರಾದ ಶಿವರಾಜ ಶಾಸ್ತ್ರೀ, ಪರಪ್ಪ, ಮಹೇಶಸ್ವಾಮಿ ಇತರರಿದ್ದರು. 
ಕೊಪ್ಪಳ

ದೇವರನ್ನು ಕಾಣಲು ಪರಿಸರ ರಕ್ಷಣೆ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಆಯುಷ್ ಇಲಾಖೆಯ ಆಡಳಿತ ಆರೋಗ್ಯಾಧಿಕಾರಿ ಡಾ.ಪರ್ವತ ಗೌಡ ಹಿರೇಗೌಡರ್ ಹೇಳಿಕೆ
ತಾವರಗೇರಾ: ಆರೋಗ್ಯ ಭಾಗ್ಯ ಅತಿ ಮುಖ್ಯ. ಸಾಧನೆ ಮಾಡಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಆಯುಷ್ ಇಲಾಖೆಯ ಆಡಳಿತ ಆರೋಗ್ಯಾಧಿಕಾರಿ ಡಾ.ಪರ್ವತ ಗೌಡ ಹಿರೇಗೌಡರ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಿಮಿತ್ತ ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ, ಅರಿವು ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಳಿ, ನೀರು, ಬೆಳಕು ಸೇರಿ ಭಗವಂತ ರಚನೆಯಾಗಿದ್ದಾನೆ. ದೇವರನ್ನು ಕಾಣಬೇಕಾದರೆ ಪರಿಸರ ರಕ್ಷಣೆ ಅಗತ್ಯ. ಹೆಚ್ಚೆಚ್ಚು ಗಿಡಗಳನ್ನು ಬೆಳೆಸಿದಾಗ ನೆಮ್ಮದಿ ಸಿಗಲಿದೆ ಎಂದರು. ರೋಗಿಗಳ ತಪಾಸಣೆ ನಡೆಸಿ ಔಷಧಿಗಳನ್ನು ಉಚಿತವಾಗಿ ವಿತರಿಸಿದರು.
ಆಯುಷ್ ವೈದ್ಯಾಧಿಕಾರಿ ಯಮನಪ್ಪ ಸಿರವಾರ, ಡಾ.ಭಾರುತಿ ದೊಡ್ಡಮನಿ, ಡಾ.ದೀಪಾ ಕಾಕತಿಕರ್, ಡಾ.ವಿಜಯಲಕ್ಷ್ಮೀ, ಪಪಂ ಸದಸ್ಯ ಕರಡೆಪ್ಪ ನಾಲತವಾಡ, ಪ್ರಮುಖರಾದ ಶಿವರಾಜ ಶಾಸ್ತ್ರೀ, ಪರಪ್ಪ, ಮಹೇಶಸ್ವಾಮಿ, ಮಲ್ಲಪ್ಪ ಜುಮಲಾಪೂರ, ಕೂಡಲೆಪ್ಪ, ಗಡಗಿಬಸಪ್ಪ, ವೀರೇಶ ಗುಬ್ಬಿ ಇತರರಿದ್ದರು.