ಕನಕಗಿರಿ ಮೇಲುಗಡೆ ಅಗಸಿಯಲ್ಲಿ ಈದ್-ಮಿಲಾದ್ ಮೆರವಣಿಗೆಗೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು,ಜಾಮಿಯಾ ಮಸ್ಜೀದ್ ಮೌಲಾನಾ ಮಹ್ಮದ್ ಸಜಾ ನೂರಿ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ ಕಲುಬಾಗಿಲಮಠ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಇತರರಿದ್ದರು. 
ಕೊಪ್ಪಳ

ಜಗತ್ತಿಗೆ ಶಾಂತಿ ಸಾರಿದರು

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ
  • ಕನಕಗಿರಿ ಈದ್-ಮಿಲಾದ್ ಮೆರವಣಿಗೆ
ಕನಕಗಿರಿ: ಪ್ರವಾದಿ ಮುಹ್ಮದ್ ಪೈಗಂಬರರು ಜಗತ್ತಿಗೆ ಶಾಂತಿಯನ್ನು ಸಾರಿದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ ಕಲುಬಾಗಿಲಮಠ ಹೇಳಿದರು.
ಮುಸ್ಲಿಂ ಸಮಾಜದ ಈದ್-ಮಿಲಾದ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಇಸ್ಲಾಂ ಧರ್ಮದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈದ್ ಮಿಲಾದ್ ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ ಎಂದರು.
ಮಾಜಿ ಶಾಸಕ ಬಸವರಾಜ ಧಡೇಸೂಗೂರು, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪಪಂ ಅಧ್ಯಕ್ಷ ರವಿ ಭಜಂತ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ್ ಸಜ್ಜನ್ ಮಾತನಾಡಿ, ಪೈಗಂಬರರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಅದ್ಧೂರಿ ಮೆರವಣಿಗೆ: ಹಬ್ಬದ ನಿಮಿತ್ತ ನಡೆದ ಮೆರವಣಿಗೆಗೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು, ಜಾಮಿಯಾ ಮಸ್ಜೀದ್ ಮೌಲಾನಾ ಮಹ್ಮದ್ ಸಜಾ ನೂರಿ ಚಾಲನೆ ನೀಡಿದರು. ಕನಕದಾಸ ವೃತ್ತ, ಜಗಜೀವನರಾಮ್-ಅಂಬೇಡ್ಕರ್ ವೃತ್ತ, ಛತ್ರಪತಿ ಶಿವಾಜಿ, ವಾಲ್ಮೀಕಿ ವೃತ್ತ ಹಾಗೂ ಕನಕಾಚಲಪತಿ ದೇವರಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವೈಕ್ಯ ಮೆರೆಯಲಾಯಿತು. ಯುವಕರು ಡಿಜೆ ಸದ್ದಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾಬಾಸಾಬ ಸುಳೇಕಲ್, ಪ್ರಮುಖರಾದ ಹೊನ್ನುರಸಾಬ ಮೇಸ್ತ್ರಿ, ಇಮಾಮಸಾಬ ಎಲಿಗಾರ, ಮೌಲಾನಾ ಅಬ್ದುಲ್ ಹಫೀಜ್ ಕ್ವಾಟಿ, ಶಮ್ಸ್ ಏ ತಬರೇಜ್, ಶೌಕತ್ ನಡಲಮನಿ, ಮೌಲಾಸಾಬ ಸಿರಿವಾರ, ಪಾಷಾ ಮುಲ್ಲಾರ, ಮಹ್ಮದ್‌ಸಾಬ ಅಗರಬತ್ತಿ, ಮಕ್ತುಮ್ ಚಳ್ಳಮರದ್ ಇತರರಿದ್ದರು.