ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್​ ನಿಯೋಗ ಸೋಮವಾರ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಿತು. ಪ್ರಮುಖರಾದ ಬಂಡೆಪ್ಪ ಕಾಂಶೆಪೂರ, ವೆಂಕಟರಾವ್​ ನಾಡಗೌಡ, ಸಿ.ವಿ.ಚಂದ್ರಶೇಖರ ಇದ್ದರು. 
ಕೊಪ್ಪಳ

ಕೊಪ್ಪಳಕ್ಕೆ ಎಚ್​ಡಿಡಿ ಆಗಮನ ಶೀಘ್ರ

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ
ಕೊಪ್ಪಳ:ಮಾಜಿ ಪ್ರಧಾನಿ, ಜೆಡಿಎಸ್​ ರಾಷ್ಟ್ರಾಧ್ಯಕ್ಷ ಎಚ್​.ಡಿ.ದೇವೇಗೌಡ ಶ್ರೀ ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ದೆಹಲಿ ಎಚ್​ಡಿಡಿ ನಿವಾಸದಲ್ಲಿ ಪಕ್ಷ ಸಂಘಟನೆ ಕುರಿತು ಸುಧೀರ್ಘ ಚರ್ಚೆ ನಡೆಸಲಾಯಿತು. ಸಂಘಟನೆ, ಸ್ಥಳಿಯ ಸಂಸ್ಥೆಗಳ ಹಾಗೂ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದೇವೇಗೌಡ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುವರು. ಕೊಪ್ಪಳದಲ್ಲಿ ಜೆಡಿಎಸ್​ ಬಲಗೊಂಡಿದ್ದು, ಮೈತ್ರಿ ಪಕ್ಷ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಜಂಟಿಯಾಗಿ ಜಿಲ್ಲಾದ್ಯಂತ ಸಂಟನೆ ಬಲಗೊಳಿಸುತ್ತಿದ್ದು ಭವಿಷ್ಯದ ಚುನಾವಣೆಗಳಲ್ಲಿ ನಮ್ಮ ಗೆಲುವು ತಡೆಯಲಾಗದು. ಈ ನಿಟ್ಟಿನಲ್ಲಿ ದೇವೇಗೌಡ ಕೊಪ್ಪಳ ಪ್ರವಾಸ ಹಮ್ಮಿಕೊಳ್ಳುವ ಭರವಸೆ ನೀಡಿದ್ದಾರೆ ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಉಕ್ಕು ಮತ್ತು ಬೃಹತ್​ ಕೈಗಾರಿಕೆ ಸಚಿವ ಎಚ್​.ಡಿ.ಕುಮಾರಸ್ವಾಮಿ ಭೇಟಿ ಮಾಡಿದ್ದು ಕೊಪ್ಪಳದಲ್ಲಿ ಕಾರ್ಖಾನೆಗಳ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಲು ಮನವಿ ಮಾಡಲಾಯಿತು. ಹಾನಿಕಾರಕ ಅಂಶಗಳನ್ನು ಹೊರಸೂಸುವ ಟಕಗಳಿಂದ ಪರಿಸರ ನಾಶವಾಗಿದೆ. ಇದನ್ನು ಖಂಡಿಸಿ ನಿರಂತರ ಹೋರಾಟ ನಡೆಯುತ್ತಿದೆ. ಮುಂದಿನ ವಾರ ಹೋರಾಟ ಒಂದು ವರ್ಷ ಪೂರ್ಣಗೊಳಿಸಲಿದೆ. ಕೇಂದ್ರ ಅಧಿಕಾರಿಗಳು ಕೊಪ್ಪಳ ಪರಿಸರ ಕುರಿತು ವರದಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಅಂತಿಮ ರ್ನಿಣಯ ಕೈಗೊಳ್ಳಬೇಕಿದೆ. ಜನತೆ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಕ್ರಮ ಕೈಗೊಳ್ಳಲಿದೆ ಎಂದು ಎಚ್​ಡಿಕೆ ಭರವಸೆ ನೀಡಿದ್ದಾರೆಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.