ಹೈದರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಹನುಮಂತಪ್ಪ ಕರಿಗಾರ, ಶಿಕ್ಷಕರಾದ ರೇವಣಪ್ಪ ಬೆನ್ನಳ್ಳಿ, ಶಂಕ್ರಮ್ಮ ಶಾಶ್ಯಾಳ, ಷಣ್ಮುಖಪ್ಪ ಕುರಿ, ಹನುಮಂತ ಹಳ್ಳಿ, ಸಂಗೀತಾ ಪೂಜಾರ ಇತರರಿದ್ದರು. 
ಕೊಪ್ಪಳ

ಸಾಮರಸ್ಯವೇ ಧರ್ಮವೆಂದ ಗುರು

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಹನುಮಂತಪ್ಪ ಕರಿಗಾರ ಹೇಳಿಕೆ
  • ಅಳವಂಡಿ ಹೈದರನಗರ ಸಂತ ಸೇವಾಲಾಲ್ ಜಯಂತಿ
ಅಳವಂಡಿ: ಸಾಮಾಜಿಕ ಸುಧಾರಣೆ ಹರಿಕಾರ, ಜನರಲ್ಲಿನ ಮೂಢನಂಬಿಕೆಗಳನ್ನು ತೊಲಗಿಸಿ, ಮದ್ಯಪಾನ ಮತ್ತು ಇತರ ದುಶ್ಚಟಗಳಿಂದ ದೂರವಿರಲು ಬೋಧಿಸಿದ ಗುರು ಸೇವಾಲಾಲರು ಎಂದು ಮುಖ್ಯಶಿಕ್ಷಕ ಹನುಮಂತಪ್ಪ ಕರಿಗಾರ ತಿಳಿಸಿದರು.
ಸಮೀಪದ ಹೈದರನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸತ್ಯ, ನಿಷ್ಠೆ, ಮತ್ತು ಸಾಮರಸ್ಯವೇ ಧರ್ಮ ಎಂದು ಬೋಧಿಸಿದ ಗುರು, ಸಮಾಜದಲ್ಲಿನ ತಾರತಮ್ಯಗಳನ್ನು ತೊಡೆದು ಹಾಕಿ, ಎಲ್ಲ ಜನಾಂಗದವರು ಸೌಹಾರ್ದತೆಯಿಂದ ಬಾಳಬೇಕು ಎಂದು ಸಾರಿದರು ಎಂದರು.