ಕಾರಟಗಿಯಲ್ಲಿ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಸದಸ್ಯರಾದ ಎಚ್.ಈಶಪ್ಪ, ಹಿರೇಬಸಪ್ಪ ಸಜ್ಜನ್, ಸುರೇಶ, ಸಿದ್ದಪ್ಪ ಬೇವಿನಾಳ, ಪ್ರಮುಖರಾದ ಶಶಿಧರಗೌಡ ಪಾಟೀಲ್, ಕೆ.ಸಿದ್ದನಗೌಡ ಇತರರಿದ್ದರು.
- ಸಚಿವ ಶಿವರಾಜ ತಂಗಡಗಿ ಮಾಹಿತಿ
- ಕಾರಟಗಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಕಾರಟಗಿ; ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 20.51 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಪುರಸಭೆ ಬಳಿಯ 31ನೇ ವಿತರಣಾ ನಾಲೆ ಮೇಲೆ ಆರ್.ಜಿ. ರಸ್ತೆಯಿಂದ ಯರಡೋಣಾ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನವಲಿ ರಸ್ತೆಯ ನಿರೀಕ್ಷಣಾ ಮಂದಿರ ಪಕ್ಕದ ಸಾಂಸ್ಕೃತಿಕ ಭವನದ ಸುತ್ತ ಕಾಂಪೌಂಡ್ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆಗೆ 83 ಲಕ್ಷ ರೂ., ಪಟ್ಟಣದ ಚಳ್ಳೂರು ಕ್ರಾಸ್‌ನಿಂದ ರಾಮನಗರದವರೆಗೆ ವಿದ್ಯುತ್ ದೀಪ ಅಳವಡಿಕೆಗೆ 59 ಲಕ್ಷ ರೂ., ಆರ್.ಜಿ.ರಸ್ತೆಯಿಂದ ಯರಡೋಣಾ ರಸ್ತೆ ಕಾಮಗಾರಿಗೆ 36 ಲಕ್ಷ ರೂ., ಹೊಸ ಜೂರಟಗಿಯಲ್ಲಿ ಎಸ್ಟಿ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 1 ಕೋಟಿ ರೂ., ಹುಳ್ಕಿಹಾಳ ಕ್ಯಾಂಪ್ ಮುಖ್ಯರಸ್ತೆಯಿಂದ ಆರ್.ಜಿ.ಮುಖ್ಯರಸ್ತೆವರೆಗೆ ಡಾಂಬರೀಕರಣ 98.69 ಲಕ್ಷ ರೂ., ಹುಳ್ಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಸಿ ಕಾಲನಿಯಲ್ಲಿ ಸಿಸಿ ರಸ್ತೆಗೆ 25ಲಕ್ಷ ರೂ., ಚೌಡೇಶ್ವರಿಕ್ಯಾಂಪ್‌ನ ಎಸ್ಸಿ ಕಾಲನಿಯ ಸಿಸಿ ರಸ್ತೆ ಕಾಮಾಗಾರಿಗೆ ತಲಾ 50ಲಕ್ಷ ರೂ., ಕಕ್ಕರಗೋಳ ಗ್ರಾಪಂ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 1.5 ಕೋಟಿ ರೂ., ಹಾಗೂ ಬೆನ್ನೂರು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ 4 ಕೋಟಿ ರೂ., ಈಳಿಗನೂರು ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ 9.7 ಕೋಟಿ ರೂ. ಬೃಹತ್ ಅನುದಾನ ಬಿಡುಗಡೆಗೊಳಿಸಿ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಸದಸ್ಯರಾದ ಎಚ್.ಈಶಪ್ಪ, ಹಿರೇಬಸಪ್ಪ ಸಜ್ಜನ್, ಸುರೇಶ, ಸಿದ್ದಪ್ಪ ಬೇವಿನಾಳ, ಪ್ರಮುಖರಾದ ಶಶಿಧರಗೌಡ ಪಾಟೀಲ್, ಕೆ.ಸಿದ್ದನಗೌಡ, ವಿಜಯ ಕೋಲ್ಕಾರ್, ಚಿದಾನಂದಪ್ಪ ಈಡಿಗೇರ್, ಕಂಕರ್ ಹುಸೇನ್, ಮಂಜುನಾಥ ಸುದ್ದಿ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಸೋಮನಾಥ ಗಚ್ಚಿನಮನಿ, ಮೈಬೂಬ್ ಬಳಿಗಾರ್, ಖಾದರಬಾಷ, ಶಬ್ಬೀರ್ ಚಳ್ಳೂರು, ಚಂದ್ರಶೇಖರ ಬಳೂಟಗಿ, ಚಾಂದಪಾಶಾ, ವೀರೇಶ ಯತ್ನಟ್ಟಿ ಇತರರಿದ್ದರು.