ಮೂರು ವರ್ಷದ ಗೃಹಲಕ್ಷ್ಮೀ ಹಣ ಪಾವತಿ ಹಾಗೂ ವಿವಿಧ ಬೇಡಿಕೆ ಈಡೆರಿಕೆಗಾಗಿ ಜಿಲ್ಲಾಡಳಿತ ಭವನದ ಮುಂದೆ ಶರಣಪ್ಪ ಭೀಮಪ್ಪ ಭೋವಿ ಏಕಾಂಗಿಯಾಗಿ ನಿರಂತರ ಧರಣಿ ಸತ್ಯಾಗ್ರಹ ಕುಳಿತಿರುವುದು.
- ಗೃಹಲಕ್ಷ್ಮೀಗೆ ಏಕಾಂಗಿಯಾಗಿ ಹೋರಾಟ
ಕೊಪ್ಪಳ :ಗೃಹಲಕ್ಷ್ಮೀ ಅರ್ಜಿಯು ಆನ್ಲೈನ್ನಲ್ಲಿ ಅಪ್ಲೋಡ ಆಗದೆ ಮೂರು ವರ್ಷ ಮುಗಿದರು ನಮಗೆ ಸಿಗದ ಗೃಹಲಕ್ಷ್ಮೀ ಹಣ ನಮ್ಮ ಸಮಸ್ಯೆ ಬಗೆಹರಿಸದೆ ನನಗೆ ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ನಿವಾಸಿ ಶರಣಪ್ಪ ಭೀಮಪ್ಪ ಭೋವಿ ಜಿಲ್ಲಾಡಳಿತ ಭವನದ ಎಂದುರು ಏಕಾಂಗಿಯಾಗಿ ನಿರಂತರ ಧರಣಿ ಸತ್ಯಾಗ್ರಹ ಕುಳಿದ್ಧಾರೆ.
ಗೃಹಲಕ್ಷ್ಮೀ ಯೋಜನೆಯ ಮೂರು ವರ್ಷದ ಎಲ್ಲಾ ಕಂತಿನ ಹಣ ಶೀಘ್ರದಲ್ಲಿಯೇ ಕೊಡಿಸಬೇಕು. ಗೃಹಲಕ್ಷ್ಮೀ ಯೋಜನೆಗಾಗಿ ಕಚೇರಿಗೆ ಅಲೆದಾಡಿದರು ನಮಗೆ ನಮ್ಮ ಸಮಸ್ಯೆ ಬಗೆಹರಿಸದೆ ನಾಳೆ ಬಾ ನಾಡಿದ್ದು ಬಾ ಅಂತಾ ನನಗೆ ಕಿರುಕುಳ ನೀಡಿದ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗೆ ಶೀಘ್ರದಲ್ಲಿಯೇ ಕಠಿಣ ಕ್ರಮ ಜರುಗಿಸಬೇಕು. ಕಚೇರಿ ಅಲೆದಾಟಕ್ಕೆ ರ್ಖಚಾದ ಸುಮಾರು 20&25 ಸಾವಿರ ರೂ. ಹಣವನ್ನು ಕೊಡಿಸಬೇಕು. ನಮ್ಮ ಸಮಸ್ಯೆ ಬಗೆಹರಿಸದೆ ಪೋನ್ ರಿಸಿವ್ ಮಾಡಿ ಸುಳ್ಳು ಹೇಳಿ 15 ದಿನದಿಂದ ಪೋನ್ ರಿಸಿವ್ ಮಾಡದೆ ನನಗೆ ಕಿರುಕುಳ ನೀಡಿದ ಕುಷ್ಟಗಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಫಾರೂಕ್ ಡಾಲಾಯತ್ನ್ನು ಶೀಘ್ರ ಅಧ್ಯಕ್ಷ ಸ್ಥಾನದಿಂದ ಅಮಾನತ್ತು ಗೋಳಿಸಬೇಕು. ಬೇಡಿಕೆ ಈಡೆರಿಸದಿದ್ದರೆ ಉಪವಾಸ ಸತ್ಯಾಗ್ರ ಮಾಡುವುದಾಗಿ ಎಚ್ಚರಿಸಿರು.