ಗಂಗಾವತಿ ತಾಲೂಕಿನ ಸೂರ್ಯನಾಯಕನ ತಾಂಡಾದಲ್ಲಿ ಬೆಂಕಿ ಆಕಸ್ಮಿಕದಿಂದ ಹುಲ್ಲಿನ ಬಣಿವೆಗೆ ಬೆಂಕಿ ಬುಧವಾರ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿತು. 
ಕೊಪ್ಪಳ

36 ಎಕರೆ ಭತ್ತದ ಹುಲ್ಲು ಬೆಂಕಿಗಾಹುತಿ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ತಾಲೂಕಿನ ಸೂರ್ಯನಾಯಕನ ತಾಂಡಾದಲ್ಲಿ ಬುಧವಾರ ಬೆಂಕಿ ತಗುಲಿ 36 ಎಕರೆ ಭತ್ತದ ಹುಲ್ಲು ಸಂಪೂರ್ಣ ಸುಟ್ಟಿದೆ.
ತಾಂಡಾದ ರೈತರಾದ ಶ್ರೀನಿವಾಸ ಧರ್ಮಪ್ಪ, ಕೃಷ್ಣಪ್ಪ ಮತ್ತು ಅಮರೇಶ ಎಂಬುವರಿಗೆ ಸೇರಿದ ಬಣವೆಗಳು ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ತಾಲೂಕಿನ ಬಸಾಪಟ್ಟಣ ಗ್ರಾಪಂ ಕೂಲಿಕಾರರು ನರೇಗಾ ಕೆಲಸಕ್ಕಾಗಿ ತಾಂಡಾಕ್ಕೆ ಬಂದಿದ್ದು, ಅವರ ನಿರ್ಲಕ್ಷ್ಯದಿಂದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಸಂಬಂಧಪಟ್ಟ ಗ್ರಾಪಂಯಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅಖಿಲ ಕರ್ನಾಟಕ ಬಂಜಾರ್ ಲಂಬಾಣಿ ಸೇವಾಲಾಲ್ ಸಮಾಜ ಸೂರ್ಯನಾಯಕ ತಾಂಡಾದ ಕಾರ್ಯಾಧ್ಯಕ್ಷ ಬಾಲಾಜಿ ಚವ್ಹಾಣ್ ಒತ್ತಾಯಿಸಿದ್ದಾರೆ.