ಬೆಟಗೇರಿಯಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಉಪನ್ಯಾಸಕ ಶರಣಬಸವ ಬಿಳಿಯಲೆ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಗರಡ್ಡಿ, ಪ್ರಮುಖರಾದ ಪ್ರಭಯ್ಯ ಕಂಬಿ, ಎಂ.ಎಂ.ಮುಜುಗುಂಡ, ಲಕ್ಷ್ಮಣ ಬಿಸರಹಳ್ಳಿ, ಬಿ.ಎನ್.ಬಿಸರಹಳ್ಳಿ, ಎಸ್.ಎಫ್.ಸಂಗಟಿ, ವೈ.ಎಂ.ಗುರುರಾಜ, ಲಕ್ಷ್ಮಣ ದಾಸರ, ಮಾಲಾ ಬಡಿಗೇರ, ಶಂಕರ ಇತರರಿದ್ದರು. 
ಕೊಪ್ಪಳ

ಸರ್ಕಾರಿ ಶಾಲೆಗಳು ನಾಡಿನ ಕಲ್ಪವೃಕ್ಷ

ಪ್ರಮುಖ ಮುಖ್ಯಾಂಶಗಳು

  • ಸ್ನೇಹ ಸಮ್ಮೇಳನ

ಸರ್ಕಾರಿ ಶಾಲೆಗಳು ನಾಡಿನ ಕಲ್ಪವೃಕ್ಷ

ಅಳವಂಡಿ: ಜನ್ಮಕೊಟ್ಟ ಪಾಲಕರ ನಂತರದ ಸ್ಥಾನ ಗುರುವಿಗೆ. ಇಂಥ ಗುರುಗಳು ಜೀವನ ನಡೆಸಲು ಅಗತ್ಯ ಶಿಕ್ಷಣ ನೀಡಿ ಕುಟುಂಬಕ್ಕೆ ಬೆಳಕಾಗಿದ್ದಾರೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಶರಣಬಸವ ಬಿಳಿಯಲೆ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ಸಮಾಹಿಪ್ರಾ ಶಾಲೆಯ 1981-82ರಿಂದ 1991-92ನೇ ಸಾಲಿನ ವರೆಗಿನ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳು ನಾಡಿನ ಕಲ್ಪವೃಕ್ಷ, ಕಾಮಧೇನು, ಬಡವರ ವಿಶ್ವವಿದ್ಯಾಲಯ ಇದ್ದ ಹಾಗೆ. ಶಾಲೆಗಳಲ್ಲಿ ಶಿಕ್ಷಕರು ಶಿಕ್ಷಣ, ಸಂಸ್ಕಾರ, ಶಿಸ್ತು ತಿಳಿಸಿ ದಾರಿದೀಪವಾಗಿದ್ದಾರೆ.
ಶಿಕ್ಷಕರನ್ನು ನೆನೆಯುವ ಹಾಗೂ ಋಣ ಸಂದಾಯ ಮಾಡುವ ಕಾರ್ಯಕ್ರಮವೇ ಗುರುವಂದನೆ. ಶಾಲೆ ನೆನಪುಗಳ ಸಾಗರವಾಗಿದೆ ಎಂದರು. ಇದಕ್ಕೂ ಮುನ್ನ ಗುರುಗಳನ್ನು ಮೆರವಣಿಗೆ ಮೂಲಕ ಸ್ವಾಗತ ಮಾಡಲಾಯಿತು. ನಂತರ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಗರೆಡ್ಡಿ, ಪ್ರಮುಖರಾದ ಪ್ರಭಯ್ಯ ಕಂಬಿ, ಎಂ.ಎಂ.ಮುಜುಗುಂಡ, ಲಕ್ಷ್ಮಣ ಬಿಸರಹಳ್ಳಿ, ಬಿ.ಎನ್.ಬಿಸರಹಳ್ಳಿ, ಎಸ್.ಎಫ್.ಸಂಗಟಿ, ವೈ.ಎಂ. ಗುರುರಾಜ, ಲಕ್ಷ್ಮಣ ದಾಸರ, ಮಾಲಾ ಬಡಿಗೇರ, ಶಂಕರ ಮಾಳೆಕೊಪ್ಪ, ವೀರೇಶ, ಶಶಿಕಲಾ ಮಳಿಗೆ, ಲಕ್ಷ್ಮೀ ಬಡಿಗೇರ, ಗಂಗಮ್ಮ ದೇವರಮನೆ, ರವಿ ಶೆಟ್ಟರ, ಸುಜಾತಾ, ಗಂಗಪ್ಪ, ಪರಶುರಾಮ ಇತರರಿದ್ದರು,