ಕೊಪ್ಪಳ : ಇಂಟರ್ನ್ಯಾಷನಲ್ ಲಿಂಗಾಯತ ಯೂಥ್ ೋರಮ್ನಿಂದ ಜ.29ರಿಂದ ೆ.2ವರೆಗೆ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ೋರಮ್ನ ಹುಬ್ಬಳ್ಳಿ ಚಾಪ್ಟರ್ ಅಧ್ಯಕ್ಷ ಶರಣ್ ಪಾಟೀಲ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ಯಾಲೆಸ್ ಗ್ರೌಂಡ್ಸ್ನ ವೈಟ್ ಪೆಟಲ್ಸ್ನಲ್ಲಿ ಸಮ್ಮೇಳನ ಇರಲಿದೆ. ಹಿಂದಿನ ಸಮ್ಮೇಳನಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಅತ್ಯಧಿಕ ಹೂಡಿಕೆ ಆಗಿದೆ. ಮೈಸೂರು ಸಮ್ಮೇಳನದಲ್ಲಿ 130 ಕೋಟಿ ರೂ., ಹುಬ್ಬಳ್ಳಿಯಲ್ಲಿ 64 ಕೋಟಿ ರೂ., ಬೆಂಗಳೂರು ಸಮ್ಮೇಳನದಲ್ಲಿ 35 ಕೋಟಿ ರೂ. ಒಡಂಬಡಿಕೆ ನಡೆದಿವೆ. ವ್ಯಾಪಾರ, ನೆಟ್ವರ್ಕಿಂಗ್ ಮತ್ತು ಉದ್ಯಮ ವೃದ್ಧಿಯಲ್ಲಿ ಹೊಸ ಮಾನದಂಡ ಸ್ಥಾಪಿಸುವ ನಿಟ್ಟಿನಲ್ಲಿ ಈ ಬಾರಿ ಸಮ್ಮೇಳನ ಆಯೋಜಿಸಿದ್ದೇವೆ. 75 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀೆ ಇದೆ. ನಾಲ್ಕು ದಿನಗಳಲ್ಲಿ ಉದ್ಯಮಿಗಳು, ಕೈಗಾರಿಕೆ ನಾಯಕರು, ನೀತಿ ನಿರ್ಧಾರಕರು, ಸ್ಟಾರ್ಟ್ಪ್ಗಳು, ಎಂಎಸ್ಎಂಇಗಳು ಭಾಗಿಯಾಗಲಿವೆ.
260ಕ್ಕೂ ಹೆಚ್ಚು ಸ್ಟಾಲ್ಗಳಿರಲಿವೆ. ಜ.29ರ ಸಂಜೆ 4.30ಕ್ಕೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸುವರು. ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಆರ್ಎಲ್ ಸಂಸ್ಥೆ ಸಿಎಂಡಿ ವಿಜಯ ಸಂಕೇಶ್ವರ ಇತರ ಗಣ್ಯರು ಭಾಗಿಯಾಗುವರು. ೆ.1ರಂದು ನಡೆವ ಸಮಾರೋಪ ಸಮಾರಂಭವನ್ನು ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಶ್ರೀ ಬಸವರ ಮಾರುಳಸಿದ್ದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು. ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕೆವಿಎಲ್ಡಿಸಿಎಲ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಮಾಜಿ ಸಚಿವ ಮುರುಗೇಶ ನಿರಾಣಿ ಇತರರು ಭಾಗಿಯಾಗುವರು ಎಂದು ತಿಳಿಸಿದರು.
ಪ್ರಮುಖರಾದ ಚಿದಾನಂದ ಮುದಕಲಿ, ಅಭಿಷೇಕ ಗುರುರಾಜ ಹಲಗೇರಿ ಇದ್ದರು.