ಅಳವಂಡಿ ಸಮೀಪದ ನಿಲೋಗಿಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ ನಿಂಗಾಪೂರ, ಮುಖ್ಯಶಿಕ್ಷಕ ಗುರುರಾಜ ಪಾಟೀಲ್ ಇತರರಿದ್ದರು.
- ವಾರ್ಷಿಕ ಸ್ನೇಹ ಸಮ್ಮೇಳನ
- ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಮಯ ನೀಡಿ
ಅಳವಂಡಿ: ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಸಮೀಪದ ನಿಲೋಗಿಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ಮಕ್ಕಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಸಮಯ ಮೀಸಲಿಡಬೇಕು. ಮಕ್ಕಳ ಪ್ರತಿಭೆ ಪ್ರದರ್ಶಿಸಲು, ಸೃಜನಶೀಲತೆ ಉತ್ತೇಜಿಸಲು ಇಂಥ ಕಾರ್ಯಕ್ರಮಗಳು ಸಹಕಾರಿ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ ನಿಂಗಾಪೂರ, ಮುಖ್ಯಶಿಕ್ಷಕ ಗುರುರಾಜ ಪಾಟೀಲ್, ಪ್ರಮುಖರಾದ ಭೀಮಣ್ಣ ಹವಳಣ್ಣವರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ ಪಾಟೀಲ್, ಹನುಮಪ್ಪ ಹೊಸಮನಿ, ಕುಲ್ಲಳ್ಳೆಪ್ಪ, ಚರಂತಯ್ಯ, ಹುಚ್ಚಿರಪ್ಪ, ಹಂಚಿನಾಳಪ್ಪ, ಮಂಜುನಾಥ, ಕನಕನಗೌಡ, ಪರಶುರಾಮ ಮೆಕ್ಕಿ, ಪರಶುರಾಮ, ಮಂಜುನಾಥ ಕೇಸಲಾಪೂರ, ಮಾಲತೇಶ, ಶಿವು, ಹಂಚಾಲಪ್ಪ, ಅಂದಪ್ಪ ಇತರರಿದ್ದರು.