ಗಂಗಾವತಿ ಬಾಬು ಜಗಜೀವನರಾಂ ವೃತ್ತದಲ್ಲಿ ಮಾದಿಗ ಸಮಾಜದ ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸಮಾಜದ ಮುಖಂಡ ಹಾಗೂ ಬಿಎಸ್ಪಿ ಜಿಲ್ಲಾಧ್ಯಕ್ಷ ಹುಲಿಗೇಶ ದೇವರಮನಿ, ನಗರಸಭೆ ಮಾಜಿ ಸದಸ್ಯ ಸೋಮನಾಥ ಭಂಡಾರಿ, ಪ್ರಮುಖರಾದ ಶಿವಪ್ಪ ಮಾದಿಗ, ಮಲ್ಲಿಕಾರ್ಜುನ ಗಿಣಿಮೋತಿ, ರುದ್ರೇಶ ಹೊಸಳ್ಳಿ ಇತರರಿದ್ದರು.
- ಕಠಿಣ ಶಿಕ್ಷೆ
- ಹುಬ್ಬಳ್ಳಿ
- ಮರ್ಯಾದೆ ಹತ್ಯೆ
ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ
ಗಂಗಾವತಿ: ಹುಬ್ಬಳ್ಳಿಯ ಇನಾಂ ವೀರಾಪುರದ ಮರ್ಯಾದೆ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾದಿಗ ಸಮಾಜದ ಮುಖಂಡರು ನಗರದ ಬಾಬು ಜಗಜೀವನರಾಂ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಹುಲಿಗೇಶ ದೇವರಮನಿ ಮಾತನಾಡಿ, ಮರ್ಯಾದೆ ಹತ್ಯೆ ಪ್ರಕರಣ ಖಂಡನೀಯ. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಮರ್ಯಾದೆ ಹೆಸರಿನಲ್ಲಿ ಹತ್ಯೆ ಪ್ರಕರಣ ಹೆಚ್ಚುತ್ತಿದ್ದು, ದಲಿತರ ಮೇಲಿನ ಶೋಷಣೆ ಮಿತಿ ಮೀರುತ್ತಿದೆ.
ಅಸ್ಪೃಷ್ಯತೆ ಪಿಡುಗರನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಇಂತಹ ಪ್ರಕರಣಕ್ಕೆ ಕುಮ್ಮಕ್ಕು ನೀಡುವವರಿಗೆ ವಿಶೇಷ ಕಾಯ್ದೆ ರೂಪಿಸಿ ಕಠೀಣ ಶಿಕ್ಷೆ ವಿಧಿಸಬೇಕು. ಸಾಮರಸ್ಯ ಹೆಚ್ಚಿಸುವ ಕಾರ್ಯಕ್ರಮ ಆಯೋಜಿಸಿ ಮನುಷ್ಯತ್ವ ಉಳಿಸಬೇಕಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರ ಪರಿಗಣಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವಂತೆ ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಸೋಮನಾಥ ಭಂಡಾರಿ, ಪ್ರಮುಖರಾದ ಶಿವಪ್ಪ ಮಾದಿಗ, ಮಲ್ಲಿಕಾರ್ಜುನ ಗಿಣಿಮೋತಿ, ರುದ್ರೇಶ ಹೊಸಳ್ಳಿ, ದುರುಗಪ್ಪ ಐಹೊಳೆ, ಹನುಮಂತ ಐಹೊಳೆ, ನಾಗರಾಜ ಸಿದ್ದಾಪುರ, ನರಸಿಂಹಲು, ಹನುಮೇಶ ಗುಂಡೂರು, ಹಂಪೇಶ ಹರಿಗೋಲು, ಮರಿಸ್ವಾಮಿ ದೇವರಮನಿ, ಶಂಕರ ಸಿದ್ದಾಪುರ, ವೆಂಕೋಬ ಕಂಪ್ಲಿ, ರಮೇಶ ವಿಠಲಾಪುರ, ರಾಜೇಶ ಗಾಳೆಮ್ಮಕ್ಯಾಂಪ್ ಇತರರಿದ್ದರು.