ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಸಮಾಹಿಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ವಿರೂಪಾಕ್ಷಪ್ಪ ವಂದಾಲಿ, ಪಿಕೆಪಿಎಸ್ಸೆಸ್ಸ್ ಕಾರ್ಯದರ್ಶಿ ದೊಡ್ಡಬಸಯ್ಯ ಹಿರೇಮಠ, ಕರವೇ ಗ್ರಾಮ ಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ ಇದ್ದರು.
- ಎಸ್ಡಿಎಂಸಿ ಅಧ್ಯಕ್ಷ ವಿರೂಪಾಕ್ಷಪ್ಪ ವಂದಾಲಿ ಸಲಹೆ
- ಶಾಲಾ ಪ್ರಾರಂಭೋತ್ಸವ
ಕುಷ್ಟಗಿ: ಶಾಲಾ ಮಕ್ಕಳಿಗೆ ಪುಸ್ತಕಗಳು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುವುದು ಅರ್ಥಪೂರ್ಣ ಕಾರ್ಯ ಎಂದು ಎಸ್ಡಿಎಂಸಿ ಅಧ್ಯಕ್ಷ ವಿರೂಪಾಕ್ಷಪ್ಪ ವಂದಾಲಿ ಹೇಳಿದರು.
ತಾಲೂಕಿನ ಹಿರೇಮನ್ನಾಪುರ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗ್ರಾಮೀಣ ಭಾಗದ ಮಕ್ಕಳನ್ನು ಶಾಲೆಗೆ ಕರೆ ತರುವ ಕಾರ್ಯವಾಗಬೇಕಿದೆ ಎಂದರು. ನಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಪಿಕೆಪಿಎಸ್ಸೆಸ್ಸ್ ಕಾರ್ಯದರ್ಶಿ ದೊಡ್ಡಬಸಯ್ಯ ಹಿರೇಮಠ, ಕರವೇ ಗ್ರಾಮ ಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ, ಮಹಿಳಾ ಅಧ್ಯಕ್ಷೆ ಸುರೇಖಾ ಕಂಪಾಪೂರಮಠ, ಪ್ರಮುಖರಾದ ರಾಮಣ್ಣ ಹರಟಿ, ಈರಯ್ಯ ಗದ್ದಡಕಿ, ಕಳಕಪ್ಪ ಪುರ, ಹನುಮಂತ ಕಜ್ಜಿ, ಸಂಗಪ್ಪ ಕತ್ತಿ, ಪುಂಡಲಿಕಪ್ಪ ಬುಡಕುಂಟಿ, ಏಕಲವ್ಯ ಚಳ್ಳೂರ, ರಾಘವೇಂದ್ರ ಹಂಚಿನಾಳ, ಪರಸಪ್ಪ ನರಸಾಪುರ, ಕೆ.ಹುಸೇನಸಾಬ್ ಇತರರಿದ್ದರು.