ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಲಚಕ್ರ ನಾಟಕ ಪ್ರದರ್ಶನಕ್ಕೆ ಕೊಪ್ಪಳ ವಿವಿ ಕುಲಸಚಿವ ಪ್ರೊ. ರಮೇಶ ಕೆ. ಚಾಲನೆ ನೀಡಿದರು. ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ತೋಟಪ್ಪ ಕಾಮನೂರ, ಅಜ್ಮೀರ್ ನಂದಾಪುರ, ಚಾಂದಪಾಷಾ ಕಿಲ್ಲೆದಾರ, ಶೈಲಜಾ ಹಿರೇಮಠ ಇದ್ದರು.
ಕೊಪ್ಪಳಕ್ಕೊಂದು ಪ್ರತ್ಯೇಕ ರಂಗಾಯಣ ನೀಡಿ
ಕೊಪ್ಪಳ: ಧೂಳು ಮತ್ತು ಮಸಿಯಿಂದ ಕೂಡಿರುವ ಕೊಪ್ಪಳ ಪರಿಸರಕ್ಕೆ ಸಾಂಸ್ಕೃತಿಕ ಮೆರುಗು ಮತ್ತು ಇಲ್ಲಿನ ರಂಗ ಚಟುವಟಿಕೆಗಳಿಗೆ ವೇಗ ನೀಡಲು ಜಿಲ್ಲೆಗೊಂದು ಪ್ರತ್ಯೇಕ ರಂಗಾಯಣದ ಅಗತ್ಯವಿದೆ ಎಂದು ಕೊಪ್ಪಳ ವಿವಿ ಕುಲಸಚಿವ ಪ್ರೊ. ರಮೇಶ ಕೆ. ಅಭಿಪ್ರಾಯಪಟ್ಟರು.'
ನಗರದ ಸಾಹಿತ್ಯ ಭವನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಾಲಚಕ್ರ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ವಾತನಾಡಿದರು.
ನಮ್ಮ ಭಾಗದವರಾದ ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವುದು ಕೊಪ್ಪಳಕ್ಕೆ ವರದಾನ. ಜಿಲ್ಲೆಗೆ ಪ್ರತ್ಯೇಕ ರಂಗಾಯಣ ಮಂಜೂರು ವಾಡುವಂತೆ ಅವರಿಗೆ ಮನವಿ ಸಲ್ಲಿಸೋಣ. ರಂಗಾಸಕ್ತರ ಈ ಎಲ್ಲ ಪ್ರಯತ್ನಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಎಲ್ಲ ಗಣ್ಯರು ಪ್ರತ್ಯೇಕ ರಂಗಾಯಣ ಬೇಡಿಕೆಗೆ ಸಹಮತ ಸೂಚಿಸಿದರು. ಸಹಕಾರಿ ಧುರೀಣ ತೋಟಪ್ಪ ಕಾಮನೂರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಹಾಲಯ್ಯ ಸ್ವಾಮಿ ಹುಡೇಜಾಲಿ, ಅಜ್ಮೀರ್ ನಂದಾಪುರ, ಚಾಂದಪಾಷಾ ಕಿಲ್ಲೆದಾರ, ಶೈಲಜಾ ಹಿರೇಮಠ, ಅರುಣಾ ನರೇಂದ್ರ, ಡಾ.ಪ್ರವೀಣ ಪೊಲೀಸ್ ಪಾಟೀಲ್, ಶರಣಬಸವ ಪಾಟೀಲ್, ಎಂ.ಕೆ. ಸಾಹೇಬ್ ನಾಗೇಶನಹಳ್ಳಿ, ಶರಣು ಶೆಟ್ಟರ್ ಇತರರಿದ್ದರು.