ಕುಷ್ಟಗಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಎದುರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಸಂಘದ ತಾಲೂಕು ಅಧ್ಯಕ್ಷ ಬೀರಪ್ಪ ಕುರಿ, ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ, ಕೋಶಾಧ್ಯಕ್ಷ ಮಹೇಶ ಪಡಿ, ಸಹಕಾರ್ಯದರ್ಶಿ ಪ್ರಭಾವತಿ ಮಾಳಗಿ,ಇತರರಿದ್ದರು. 
ಕೊಪ್ಪಳ

ಸರ್ವೇ ನಡೆಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡಿ

ಕುಷ್ಟಗಿ: ಬೇಸಿಗೆ ರಜೆಯಲ್ಲಿ ಜನಗಣತಿ-2026 ಸರ್ವೇ ನಡೆಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಶುಕ್ರವಾರ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಿತು.

ಕಳೆದ ಏ.16ರಿಂದ ಮೇ 15ರವರೆಗೆ ಕುಷ್ಟಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಕರು ಜನಗಣತಿ ಸಮೀಕ್ಷಾ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಕೆಸಿಎಸ್‌ಆರ್ ನಿಯಮಾವಳಿಯಂತೆ ಗಳಿಕೆ ರಜೆ ಮಂಜೂರು ಮಾಡಬೇಕು. ಆದರೆ, ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಅಶೋಕ  ಸೂಚಿಸಿದರು. 
ಬಳಿಕ ತಹಸಿಲ್ದಾರ್ ಅವರು, ಶಿಕ್ಷಕರ ಬೇಡಿಕೆಗೆ ಒಪ್ಪಿಗೆ ಸೂಚಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದರು. ಸಂಘದ ತಾಲೂಕು ಅಧ್ಯಕ್ಷ ಬೀರಪ್ಪ ಕುರಿ, ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ, ಕೋಶಾಧ್ಯಕ್ಷ ಮಹೇಶ ಪಡಿ, ಸಹಕಾರ್ಯದರ್ಶಿ ಪ್ರಭಾವತಿ ಮಾಳಗಿ, ನಿರ್ದೇಶಕರಾದ ಮ್ಯಾಗ್ಡಾಲೀನಾ, ನೌಕರರ ಸಂಘದ ಜಂಟಿ ಕಾರ್ಯದರ್ಶಿ ಸುಬಾನಸಾಬ್ ನದಾಫ್, ಶಿಕ್ಷಕರಾದ ಚಂದಪ್ಪ ಹಕ್ಕಿ, ರಾಜಕುಮಾರ ನಾಯ್ಕ, ಸಂಗಮೇಶ ಸೊಬರದ, ಮಲ್ಲಯ್ಯ ಮೋಟಗಿ, ಯಮನೂರಪ್ಪ ಕುರಿ, ರಾಮಣ್ಣ ಸಕ್ರಿ, ಶ್ರೀನಿವಾಸ ದೇಸಾಯಿ, ಉಮೇಶ ಹಿರೇಮಠ, ಸೋಮಪ್ಪ ಕೆಂದೂರು, ಜಗದೀಶ ಬಡಿಗೇರ, ವಿಜಯಕುಮಾರ ದುತ್ತರಗಿ ಇತರರಿದ್ದರು.